ETV Bharat / state

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಬಂಧನ - ಇಲವಾಲ ಪೋಲಿಸ್ ಠಾಣೆ

ಇಬ್ಬರು ನಕಲಿ ವೈದ್ಯರು ನಕಲಿ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದು ಪ್ರಕರಣ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ಪೊಲೀಸರು ಇಬ್ಬರು ನಕಲಿ ವೈದ್ಯರನ್ನ ಬಂಧಿಸಿರುವ ಘಟನೆ ಜಿಲ್ಲೆಯ ಇಲವಾಲ ಬಳಿ ನಡೆದಿದೆ.

Two duplicate Doctors
ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಬಂಧನ
author img

By

Published : Feb 13, 2020, 10:24 PM IST

ಮೈಸೂರು: ಇಬ್ಬರು ನಕಲಿ ವೈದ್ಯರು ನಕಲಿ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದು ಪ್ರಕರಣ ಬೆಳಕಿಗೆ ಬಂದಿದ್ದು, ವಿಷಯ ತಿಳಿದ ಪೊಲೀಸರು ಇಬ್ಬರು ನಕಲಿ ವೈದ್ಯರನ್ನ ಬಂಧಿಸಿರುವ ಘಟನೆ ಜಿಲ್ಲೆಯ ಇಲವಾಲ ಬಳಿ ನಡೆದಿದೆ.

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಬಂಧನ

ವಿಜಯ್ ಕುಮಾರ್ ಮತ್ತು ದೇವೇಂದ್ರ ಬಂಧಿತ ನಕಲಿ ವೈದ್ಯರು. ಈ ಇಬ್ಬರು ಖದೀಮರು ನಕಲಿ ಪ್ರಮಾಣಪತ್ರ ಇಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದು, ಕ್ಲಿನಿಕ್​ಗೆ ಬರುವ ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದರು. ಇನ್ನು ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಈ ಖದೀಮರ ಕ್ಲಿನಿಕ್ ಮೇಲೆ ಡಿಎಚ್​ಓ ವೆಂಕಟೇಶ್ ನೇತೃತ್ವದ ತಂಡ ದಾಳಿ ನಡೆಸಿದೆ. ಬಳಿಕ ಕ್ಲಿನಿಕ್​ಗೆ ಬೀಗ ಜಡಿಯಲಾಗಿದೆ.

ಇನ್ನೂ ಸ್ಥಳಕ್ಕೆ ಇಲವಾಲ ಪೋಲಿಸರು ಭೇಟಿ ನೀಡಿ ನಕಲಿ ವೈದ್ಯರನ್ನು ಬಂಧಿಸಿದ್ದು, ಇಲವಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.