ಮೈಸೂರು: ಒಂದೇ ತಿಂಗಳಲ್ಲಿ ನಂಜನಗೂಡಿನ ನಂಜುಂಡೇಶ್ವರನಿಗೆ ಕಾಣಿಕೆ ರೂಪದಲ್ಲಿ ಎರಡು ಕೋಟಿ ರೂಪಾಯಿ ಭಕ್ತಾದಿಗಳು ಅರ್ಪಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಶನಿವಾರ 21 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಒಟ್ಟು 2,15,80,467 ರೂ.ಸಂಗ್ರಹವಾಗಿದೆ. 108 ಗ್ರಾಂ ಚಿನ್ನ , 5 ಕೆಜಿ 750ಗ್ರಾಂ ಬೆಳ್ಳಿಯನ್ನು ಭಕ್ತಾದಿಗಳು ಹಾಕಿದ್ದಾರೆ.
ನಿಷೇಧಿತ ನೋಟು: ನೋಟ್ ಬ್ಯಾನ್ ಆಗಿ ಹಲವು ವರ್ಷಗಳಾಗುತ್ತಿವೆ. ಆದರೆ,ಭಕ್ತಾದಿಗಳು ಮಾತ್ರ ನಿಷೇಧಿತ ನೋಟನ್ನು ಮಾತ್ರ ಹುಂಡಿಗೆ ಹಾಕುವುದನ್ನು ತಪ್ಪಿಸುತ್ತಿಲ್ಲ. 1,000 ರೂ ಮುಖಬೆಲೆ 10 ನೋಟುಗಳು, 500 ರೂ.ಮುಖಬೆಲೆ 64 ನೋಟುಗಳನ್ನು ಹಾಕುವ ಮೂಲಕ 42 ಸಾವಿರ ರೂ.ಹಾಕಿದ್ದಾರೆ.