ETV Bharat / state

ಅನಾಥಾಲಯದ ಮಕ್ಕಳ ಬದುಕಿಗೂ ಕೊರೊನಾ ಪೆಟ್ಟು... ಲಾಕ್​ಡೌನ್ ಹಿನ್ನಲೆ ದಾನಿಗಳ ಕೊರತೆ - ಲಾಕ್‌ಡೌನ್ ಸಡಲಿಕೆ

ಕೋವಿಡ್ ತಡೆಯಲು ಸರ್ಕಾರ ಹೇರಿದ್ದ ಲಾಕಡೌನ್ ಹಿನ್ನಲೆ ದಿಢೀರ್ ಶಾಲಾ-ಕಾಲೇಜುಗಳು ಬಂದ್ ಆಗಿ ಮಕ್ಕಳು ಆಶ್ರಮದಲ್ಲಿ ಇರಬೇಕಾಯ್ತು. ಜನರ ಓಡಾಟ ಸ್ಥಗಿತವಾಗಿ ದಾನಿಗಳು ಬರುವುದು ನಿಂತು ಹೋಗಿತ್ತು. ಲಾಕ್‌ಡೌನ್ ಆರಂಭದ ಹದಿನೈದು ದಿನಗಳಲ್ಲಿ ದಾನಿಗಳು ನೀಡಿದ್ದ ದಿನಸಿ ಪದಾರ್ಥಗಳು ಖಾಲಿಯಾದವು. ಇದರಿಂದಾಗ ಆಶ್ರಮಕ್ಕೆ ಸಂಕಷ್ಟ ಎದುರಾಗಿತ್ತು.

orphanage
orphanage
author img

By

Published : Oct 25, 2020, 5:30 PM IST

ಕಲಬುರಗಿ: ಕೊರೊನಾ ಮಹಾಮಾರಿ ಎಲ್ಲಾ ವರ್ಗದ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಹೆತ್ತವರಿಗೆ ಬೇಡವಾಗಿ ಅನಾಥಾಲಯಕ್ಕೆ ಸೇರಿದ ಮಕ್ಕಳ ಬದುಕಿಗೂ ಕೊರೊನಾ ಪೆಟ್ಟು ನೀಡಿದೆ. ದಾನಿಗಳ ಸಹಾಯದಿಂದ ನಡೆಯುವ ಅನಾಥಾಶ್ರಮಗಳು ದಾನಿಗಳ ಕೊರತೆ ಉಂಟಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟಕಾಲ ಎದುರಿಸುತ್ತಿವೆ.

ಕಲಬುರಗಿ ಜಿಲ್ಲೆಯಲ್ಲಿ ವಿವೇಕಾನಂದ ಕುಷ್ಠ ಸೇವಾ ಸಮಿತಿ ಅಡಿಯಲ್ಲಿ ಉದನೂರ ಕ್ರಾಸ್ ಬಳಿ ಇರುವ ನಂದಗೋಕುಲ ಅನಾಥಾಶ್ರಮ ಹಾಗೂ ಗಾಣಗಾಪೂರದಲ್ಲಿ ದತ್ತ ಬಾಲ ಸೇವಾಶ್ರಮ, ಹೆತ್ತವರಿಗೆ ಬೇಡವಾಗಿ ಬೀದಿಗೆ ಬಿದ್ದ ಅನಾಥ ಕಂದಮ್ಮಗಳ ಜೀವನ ರೂಪಿಸುತ್ತಿವೆ. ಈ ಅನಾಥಾಶ್ರಮಗಳು ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸಿವೆ.

ಲಾಕ್​ಡೌನ್ ಹಿನ್ನಲೆ ಅನಾಥಾಲಯಗಳಿಗೆ ದಅನಿಗಳ ಕೊರತೆ

ಮಕ್ಕಳ ವಸತಿ, ಶಿಕ್ಷಣ, ಆರೋಗ್ಯ ಸೇರಿ ಪ್ರತಿಯೊಂದನ್ನು ಈ ಆಶ್ರಮಗಳು ನೋಡಿಕೊಂಡು ಮಕ್ಕಳ ಆರೈಕೆ ಮಾಡುತ್ತಿವೆ. ಸುಮಾರು 30 ವರ್ಷಗಳಿಂದ ನಡೆಯುತ್ತಿರುವ ನಂದಗೋಕುಲ ಯಾವುದೆ ಸರ್ಕಾರದ ಅನುದಾನ ಪಡೆಯದೇ, ದಾನಿಗಳು ನೀಡುವ ದಾನದಿಂದ ನೂರಾರು ಮಕ್ಕಳ ಜೀವನ ರೂಪಿಸಿವೆ‌. ಸದ್ಯ ಈ ಆಶ್ರಮದಲ್ಲಿ 18 ಹಾಗೂ ಗಾಣಗಾಪೂರ ಆಶ್ರಮದಲ್ಲಿ 58 ಜನ ಸೇರಿ ಒಟ್ಟು 76 ಅನಾಥ ಮಕ್ಕಳ ಆರೈಕೆ ಮಾಡಲಾಗುತ್ತಿದೆ. ಗಾಣಗಾಪೂರ ಆಶ್ರಮಕ್ಕೆ ಸರ್ಕಾರದಿಂದ ಅನುದಾನ ಬರುತ್ತದೆ.

ಕೋವಿಡ್ ತಡೆಯಲು ಸರ್ಕಾರ ಹೇರಿದ್ದ ಲಾಕಡೌನ್ ಹಿನ್ನಲೆ ದಿಢೀರ್ ಶಾಲಾ-ಕಾಲೇಜುಗಳು ಬಂದ್ ಆಗಿ ಮಕ್ಕಳು ಆಶ್ರಮದಲ್ಲಿ ಇರಬೇಕಾಯ್ತು. ಜನರ ಓಡಾಟ ಸ್ಥಗಿತವಾಗಿ ದಾನಿಗಳು ಬರುವುದು ನಿಂತು ಹೋಗಿತ್ತು. ಲಾಕ್‌ಡೌನ್ ಆರಂಭದ ಹದಿನೈದು ದಿನಗಳಲ್ಲಿ ದಾನಿಗಳು ನೀಡಿದ್ದ ದಿನಸಿ ಪದಾರ್ಥಗಳು ಖಾಲಿಯಾದವು. ಇದರಿಂದಾಗ ಆಶ್ರಮಕ್ಕೆ ಸಂಕಷ್ಟ ಎದುರಾಗಿತ್ತು. ದಾನಿಗಳಿಂದಲೇ ನಡೆಯುತ್ತಿರುವ ನಂದಗೋಕುಲ ಅನಾಥಶ್ರಮಕ್ಕೆ ಒಂದಿಷ್ಟು ಕಷ್ಟ ಎದುರಾಗಿತ್ತು. ಒಂದಡೆ ಲಾಕ್‌ಡೌನ್, ಮತ್ತೊಂದಡೆ ದಿನಸಿ ಸೇರಿ ಅಗತ್ಯ ವಸ್ತುಗಳು ಖಾಲಿಯಾಗಿ ದಿಕ್ಕು ತೋಚದಂತಾಗಿತ್ತು‌.

ಕೈ ಹಿಡಿದ ರೆಗ್ಯುಲರ್ ದಾನಿಗಳು:

ಲಾಕ್‌ಡೌನ್ ಆರಂಭದ ಹದಿನೈದು ದಿನಗಳ ನಂತರ ಆಶ್ರಮದ ಮಕ್ಕಳಿಗೆ ಎದುರಾದ ಕಷ್ಟಕ್ಕೆ ಹೆಗಲು ಕೊಟ್ಟಿದ್ದು ನಿರಂತರ ದಾನಿಗಳು‌. ಲಾಕ್‌ಡೌನ್ ಹಿನ್ನಲೆ ಜನರ ಓಡಾಟ ನಿಂತು ಹೋಗಿ, ಆಶ್ರಮಕ್ಕೆ ದಾನಿಗಳ ಕೊರತೆಯುಂಟಾದಾಗ, ನಿರಂತರ ದಾನಿಗಳನ್ನು ಟ್ರಸ್ಟ್ ಸದಸ್ಯರು ಸಂಪರ್ಕಿಸಿ ಅಗತ್ಯ ವಸ್ತುಗಳ ದಾನ ಪಡೆದಿದ್ದಾರೆ‌. ಆಶ್ರಮದ ಮಕ್ಕಳಿಗೆ ಎದುರಾಗಿದ್ದ ಸಂಕಷ್ಟವನ್ನು ನಿರಂತರ ದಾನಿಗಳು ಸರಿದೂಗಿಸಿ ಮಕ್ಕಳಿಗೆ ಯಾವುದೆ ಕಷ್ಟ ಬಾರದಂತೆ ನೋಡಿಕೊಂಡಿದ್ದಾರೆ ಅನ್ನೋದು ಟ್ರಸ್ಟ್ ಸದಸ್ಯರ ಮಾತು.

ಲಾಕ್‌ಡೌನ್ ಸಡಲಿಕೆ ನಂತರ ಯತಾಸ್ಥಿತಿಗೆ:

ಲಾಕ್‌ಡೌನ್ ಕಷ್ಟಕಾಲ ಕಳೆದು ಸಡಿಲಿಕೆ ಆರಂಭಗೊಂಡು ದಿನ ಕಳೆದಂತೆ ಮತ್ತೆ ದಾನಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಸೇರಿ ಅಗತ್ಯ ವಸ್ತುಗಳು ದಾನದ ರೂಪದಲ್ಲಿ ಬರುತ್ತಿವೆ. ಮಕ್ಕಳಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕಾಗಿ ಆಶ್ರಮದಲ್ಲಿ ಈ ಮುಂಚೆ ಸಾರ್ವಜನಿಕರಿಗೆ ಅನುಮತಿ ನೀಡುತ್ತಿದ್ದ ಹುಟ್ಟುಹಬ್ಬ ಆಚರಣೆ, ಮದುವೆ ವಾರ್ಷಿಕೋತ್ಸವ ಆಚರಣೆಗೆ ಈಗ ಅನುಮತಿ ನೀಡುತ್ತಿಲ್ಲ. ದಾನಿಗಳಿಂದ ಸಿದ್ದವಾದ ಆಹಾರ ಹಾಗೂ ತಿಂಡಿ ಪದಾರ್ಥಗಳನ್ನು ಪಡೆಯುವುದನ್ನು ಕೂಡಾ ನಿಲ್ಲಿಸಲಾಗಿದೆ. ದವಸ ಧಾನ್ಯ, ಪಠ್ಯ ಪುಸ್ತಕ, ದಿನಬಳಕೆ ವಸ್ತು ಅಥವಾ ಹಣದ ರೂಪದಲ್ಲಿ ಮಾತ್ರ ದಾನ ಬಂದರೆ ಸ್ವಿಕರಿಸುತ್ತಿರುವದಾಗಿ ವಿವೇಕಾನಂದ ಕುಷ್ಠ ಸೇವಾ ಸಮಿತಿ ಸದಸ್ಸ ದಯಾಘನ ಧಾರವಾಡಕರ್ ತಿಳಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.