ETV Bharat / state

ಮುಂದುವರಿದ ಸಾರಿಗೆ ನೌಕರರ ಪ್ರತಿಭಟನೆ: ತಟ್ಟೆ-ಲೋಟ ಬಡಿದು ಆಕ್ರೋಶ

ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ನೀಡಿದ ಭರವಸೆ ಈಡೇರಿಸದೇ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Mysore
ತಟ್ಟೆ-ಲೋಟ ಬಡಿದು ಪ್ರತಿಭಟನೆ
author img

By

Published : Apr 12, 2021, 4:27 PM IST

ಮೈಸೂರು: ರಾಜ್ಯ ಸರ್ಕಾರ ವಿರುದ್ಧ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇಂದು ನೌಕರರು ಹಾಗೂ ಮಹಿಳೆಯರು ತಟ್ಟೆ - ಲೋಟ ಬಾರಿಸಿ ಮೈಸೂರಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ತಟ್ಟೆ-ಲೋಟ ಬಡಿದು ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಆಕ್ರೋಶ

ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿದೆ. ನೀಡಿದ ಭರವಸೆ ಈಡೇರಿಸದೇ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ನಿರತ ಯಾಸ್ಮಿನ್ ಬಾನು ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 3 ತಿಂಗಳಿನಿಂದ ನನ್ನ ಪತಿಗೆ ಸಂಬಳವಾಗಿಲ್ಲ. ಸರ್ಕಾರ ಆಶ್ವಾಸನೆ ಕೊಟ್ಟಂತೆ ಬೇಡಿಕೆ ಈಡೇರಿಸಿಲ್ಲ ಎಂದು ದೂರಿದರು. ಮೆಕ್ಯಾನಿಕ್​ ಪರಶುರಾಮ್ ಮಾತನಾಡಿ, ರಾಜ್ಯ ಸರ್ಕಾರ 18 ಸಾವಿರ ಸಂಬಳ ನೀಡುತ್ತದೆ. ಹೀಗಾದರೆ ಸಂಸಾರ ಮಾಡುವುದು ಹೇಗೆ? ನಮ್ಮ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.