ಮೈಸೂರು: ಸಂಚಾರಿ ಹೆಡ್ ಕಾನ್ಸ್ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ ದೇವರಾಜ ಮಾರುಕಟ್ಟೆ ಬಳಿ ಭಾರಿ ಬೆಂಕಿ ಅನಾಹುತ ತಪ್ಪಿದ್ದು, ಇದೀಗ ಅವರ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಅಂಗಡಿ ಮಾಲೀಕರು ಗೌರಿ ಗಣೇಶ ಹಬ್ಬದ್ದ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಬೀಗ ಹಾಕಿಕೊಂಡು ಮನೆಯಲ್ಲಿದ್ದ, ಈ ಸಂದರ್ಭದಲ್ಲಿ ದೇವರಾಜ ಮಾರುಕಟ್ಟೆಯ ಕಾಂಪ್ಲೆಕ್ಸ್ನ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಲ್ಲೇ ಕರ್ತವ್ಯದಲ್ಲಿದ್ದ ದೇವರಾಜ ಸಂಚಾರಿ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಸುಗು ಅವರು ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿ ತಕ್ಷಣ ಪಕ್ಕದಿಂದ ನೀರನ್ನು ತಂದು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಅನಾಹುತ ತಪ್ಪಿದಂತಾಗಿದೆ.
ಅಗ್ನಿಶಾಮಕದಳ ಬರುವ ಮುನ್ನವೇ ಸಮಯ ಪ್ರಜ್ಞೆಯಿಂದ ಬೆಂಕಿ ಆರಿಸಿದ ಹೆಡ್ ಕಾನ್ಸ್ ಟೇಬಲ್ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ 25ಕ್ಕೂ ಹೆಚ್ಚು ಅಂಗಡಿಗಳಿದ್ದು, ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.