ಮೈಸೂರು: ಲಾಕ್ಡೌನ್ ಸಡಿಲಿಕೆ ನಂತರವೂ ಸಹ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳು ಪ್ರವಾಸಿಗರ ಕೊರೆತೆಯಿಂದ ಭಣಗುಡುತ್ತಿವೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚರ್ಚ್, ಚಾಮುಂಡಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಬರುತ್ತಿದ್ದಾರೆ. ಜೂನ್ 8ರಂದು ಲಾಕ್ಡೌನ್ ಸಡಿಲಿಕೆ ನಂತರ ಜೂನ್ 8ರಂದು 58 ಜನ, ಜೂನ್ 9ರಂದು 174, ಜೂನ್ 10ರಂದು 140 ಹಾಗೂ ಜೂನ್ 11ರಂದು 90 ಮಂದಿ ಪ್ರವಾಸಿಗರು ಮಾತ್ರ ಅರಮನೆಗೆ ಭೇಟಿ ನೀಡಿದ್ದಾರೆ. ಮೃಗಾಲಯಕ್ಕೆ ಜೂನ್ 8ಕ್ಕೆ 250, ಜೂನ್ 9ರಂದು 117, ಜೂನ್ 10ರಂದು 350 ಹಾಗೂ ಜೂನ್ 11ರಂದು 230 ಜನ ಮಾತ್ರ ಆಗಮಿಸಿದ್ದಾರೆ.
ಕೊರೊನಾ ಭೀತಿ ಒಂದು ಕಡೆಯಾದರೆ, ಲಾಕ್ಡೌನ್ನಿಂದ ಜನ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಶಾಲಾ, ಕಾಲೇಜುಗಳು ಆರಂಭವಾದರೆ ಮಕ್ಕಳ ಶುಲ್ಕ ಕಟ್ಟಬೇಕು. ಮುಂದಿನ ದಸರಾ ವೇಳೆಗೆ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜನಾರ್ಧನ್ ಹೇಳಿದ್ದಾರೆ.