ಮೈಸೂರು : ನಾಲ್ಕು ಮರಿಗಳೊಂದಿಗೆ ಹುಲಿ ಹೆಜ್ಜೆ ಹಾಕುವ ಮೂಲಕ ಸಫಾರಿಗರಿಗೆ ಮುದ ನೀಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಫಾರಿಗೆ ಹೋಗಿದ್ದ ಸಫಾರಿಗರು ಫುಲ್ ಖುಷಿಯಾಗಿದ್ದಾರೆ. ತಾಯಿ ಹುಲಿಯನ್ನು ಅನುಸರಿಸಿ ಪುಟಾಣಿ ಹುಲಿಗಳು ಹೆಜ್ಜೆ ಹಾಕುತ್ತ ಹೋಗುತ್ತಿರುವ ಈ ದೃಶ್ಯ ನೋಡಿ ಸಫಾರಿಗರಿಗೆ ಸಂತಸವಾಗಿದೆ.
ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ, ನಾಗರಹೊಳೆ ಸಫಾರಿ ಕೇಂದ್ರದತ್ತ ಸಫಾರಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.