ETV Bharat / state

ಚೀನಾ ಪ್ರಜೆಯಿಂದ ಹಣ ವರ್ಗಾವಣೆ ಆರೋಪ: ಬೈಲಕುಪ್ಪದಲ್ಲಿ ಇಡಿ ಅಧಿಕಾರಿಗಳಿಂದ ಟಿಬೆಟಿಯನ್​ರ ವಿಚಾರಣೆ - Bylakuppa Tibetan camp

ಬೈಲಕುಪ್ಪದ ಟಿಬೆಟಿಯನ್ ಕ್ಯಾಂಪ್​ನಲ್ಲಿರುವ 6 ಮಂದಿಗೆ ಚೀನಾದ ಪ್ರಜೆಯೊಬ್ಬ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಬೈಲಕುಪ್ಪಗೆ ಬಂದು ವಿಚಾರಣೆಗೆ ನಡೆಸಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

ಬೈಲಕುಪ್ಪದ ಟಿಬೆಟಿಯನ್ ಕ್ಯಾಂಪ್​
ಬೈಲಕುಪ್ಪದ ಟಿಬೆಟಿಯನ್ ಕ್ಯಾಂಪ್​
author img

By

Published : Sep 25, 2020, 4:55 PM IST

ಮೈಸೂರು: ಬೈಲಕುಪ್ಪದಲ್ಲಿರುವ ಟಿಬೆಟಿಯನ್ ಕ್ಯಾಂಪ್​ಗೆ ಇಡಿ ಅಧಿಕಾರಿಗಳು ಗುಪ್ತವಾಗಿ ಬಂದು 6 ಮಂದಿ ಟಿಬೆಟಿಯನ್​ರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪದ ಟಿಬೆಟಿಯನ್ ಕ್ಯಾಂಪ್​ನಲ್ಲಿರುವ 6 ಮಂದಿಗೆ ಚೀನಾದ ಪ್ರಜೆಯೊಬ್ಬ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದು, ಈ‌ ಬಗ್ಗೆ ಇಡಿ ಅಧಿಕಾರಿಗಳು ಬೈಲಕುಪ್ಪಗೆ ಬಂದು ವಿಚಾರಣೆಗೆ ನಡೆಸಿದ್ದಾರಂತೆ. ಆದರೆ ಈ‌ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರನ್ನು ಈಟಿವಿ ಭಾರತ್ ದೂರವಾಣಿಯಲ್ಲಿ ಸಂಪರ್ಕಿಸಿದ್ದಾಗ, ಈ ವಿಚಾರ ನನಗೆ ಗೊತ್ತಿಲ್ಲ. ಇದು ಜಾರಿ ನಿರ್ದೇಶನಾಲಯಕ್ಕೆ ಸಂಬಂಧಿಸಿದ್ದು, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ತರಹದ ವಿಚಾರಣೆ ಗುಪ್ತವಾಗಿ ನಡೆಯುತ್ತದೆ ಎಂದಷ್ಟೇ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.