ಮೈಸೂರು: ಕಬ್ಬು ಕಟಾವು ಮಾಡುವಾಗ ಮೂರು ಚಿರತೆ ಮರಿಗಳು ಪತ್ತೆಯಾದ ಘಟನೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಬಿ. ಸೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಇವುಗಳನ್ನು ಕಂಡ ಕೃಷಿ ಕಾರ್ಮಿಕರು, ಮಾಲೀಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿರತೆ ಮರಿಗಳನ್ನು ಬೋನಿನೊಳಗಿಟ್ಟು ತಾಯಿ ಚಿರತೆಯನ್ನು ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಬೋನಿಗೆ ಬಿದ್ದ ಚಿರತೆ.. ನಿಟ್ಟುಸಿರು ಬಿಟ್ಟ ಬದನೆಕುಪ್ಪೆ ಗ್ರಾಮಸ್ಥರು