ETV Bharat / state

ಮೈಸೂರು: 3 ದಿನಗಳ ಕಾಲ ದೇವರಾಜ ಹೂವಿನ ಮಾರುಕಟ್ಟೆ ಬಂದ್ - Three days flower market bandh

ನಗರ ಪಾಲಿಕೆಯು ದೇವರಾಜ ಮಾರುಕಟ್ಟೆಯ ಒಳಗಿರುವ ಚಿಲ್ಲರೆ ಹಾಗೂ ಸಗಟು ಹೂವಿನ ವ್ಯಾಪಾರವನ್ನು ಏಪ್ರಿಲ್ 11ರಿಂದ 13ರವರೆಗೆ ಮುಚ್ಚಲು ಆದೇಶ ನೀಡಿದೆ. ಅಲ್ಲದೆ ಬದಲಿ ಸ್ಥಳವನ್ನು ಸಹ ಗುರುತಿಸಲಾಗಿದೆ.

Flower market bandh
Flower market bandh
author img

By

Published : Apr 8, 2021, 5:27 PM IST

ಮೈಸೂರು: ಏಪ್ರಿಲ್ 13ರಂದು ಯುಗಾದಿ ಹಬ್ಬವಿರುವ ಕಾರಣ ಏ. 11ರಿಂದ 13ರವರೆಗೆ ದೇವರಾಜ ಮಾರುಕಟ್ಟೆಯ ಒಳಗಿರುವ ಹೂವಿನ ಮಾರುಕಟ್ಟೆಯನ್ನು ಬಂದ್ ಮಾಡಲು ಮೈಸೂರು ನಗರ ಪಾಲಿಕೆ ಆದೇಶ ನೀಡಿದೆ.

ನಗರದಲ್ಲಿ ಕೋವಿಡ್ ಹರಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರು ಗುಂಪು ಸೇರು‌ವ ಸ್ಥಳಗಳು ಹಾಗೂ ಮದುವೆ ಸಮಾರಂಭಗನ್ನು ಕೋವಿಡ್ ನಿಯಮಾನುಸಾರ ಸರ್ಕಾರದ ಆದೇಶದಂತೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಅಂತೆಯೇ ಏಪ್ರಿಲ್‌ 13ರಂದು ಯುಗಾದಿ ಹಬ್ಬವು ಜರುಗಲಿದ್ದು, ಹೂ ತೆದುಕೊಳ್ಳಲು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ತೆಗೆದುಕೊಳ್ಳುವ ಸಂಧರ್ಭದಲ್ಲಿ ಹೆಚ್ಚು ಜನಸಂದಣಿ ಉಂಟಾಗಬಹುದು.

ಮುಂಜಾಗ್ರತೆಯಾಗಿ ನಗರ ಪಾಲಿಕೆಯು ದೇವರಾಜ ಮಾರುಕಟ್ಟೆಯ ಒಳಗಿರುವ ಚಿಲ್ಲರೆ ಹಾಗೂ ಸಗಟು ಹೂವಿನ ವ್ಯಾಪಾರವನ್ನು ಏಪ್ರಿಲ್ 11ರಿಂದ 13ರವರೆಗೆ ಮುಚ್ಚಲು ಆದೇಶವನ್ನು ನೀಡಿದೆ. ಅಲ್ಲದೆ ಬದಲಿ ಸ್ಥಳವನ್ನು ಸಹ ಗುರುತಿಸಲಾಗಿದೆ.

ನಗರದ ರೈಲ್ವೆ ನಿಲ್ದಾಣದ ಬಳಿಯ ಜೆ.ಕೆ. ಗ್ರೌಂಡ್​​ಗೆ ಮಾರುಕಟ್ಟೆ ಸ್ಥಳಾಂತರಗೊಳಿಸಲಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸುವಂತೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.