ಮೈಸೂರು: ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸಂಪೂರ್ಣ ಲಾಕ್‌ಡೌನ್ ಅಲ್ಲ, ಹಾಫ್ ಲಾಕ್‌ಡೌನ್. ಕೂಡಲೇ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಮಾಡಲು ಮರು ವಿಮರ್ಶೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮೇ 10 ರಿಂದ 15 ದಿನಗಳ ಕಾಲ ಮುಖ್ಯಮಂತ್ರಿ ಘೋಷಣೆ ಮಾಡಿರುವ ಲಾಕ್‌ಡೌನ್ ಸರಿಯಿಲ್ಲ. ಇದೊಂದು ಕರ್ಫ್ಯೂ ತರ. ಅಂದರೆ ಹಾಫ್ ಲಾಕ್‌ಡೌನ್. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಲಿಕ್ಕರ್ ಶಾಪ್, ಹೋಟೆಲ್, ಮಾರುಕಟ್ಟೆ ತೆರೆದಿರುತ್ತವೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯವರು ತರಕಾರಿ ವ್ಯಾಪಾರ ಮಾಡಬಹುದು. ಈ ರೀತಿ ಎಲ್ಲವನ್ನು ಅರ್ಧ ಅರ್ಧ ಲಾಕ್‌ಡೌನ್ ಮಾಡಿದರೆ ಏನು ಪ್ರಯೋಜನವಿಲ್ಲ. ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಕೊಟ್ಟು ಸಂಪೂರ್ಣವಾಗಿ 15 ದಿನ ಲಾಕ್‌ಡೌನ್ ಮಾಡಿ. ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಳ್ಳಿಹಕ್ಕಿ ವಿಶ್ವನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್. ನಗರದ ಶಾಸಕ ಸಾ ರಾ ಮಹೇಶ್ ತನ್ನ ಸ್ವಂತ ಖರ್ಚಿನಲ್ಲಿ 200 ಬೆಡ್ಗಳನ್ನು ನಿರ್ಮಾಣ ಮಾಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಒಳ್ಳೆಯ ಕೆಲಸ ಎಂದು ಮೊದಲ ಬಾರಿಗೆ ಸಾ ರಾ ಮಹೇಶ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಕೋವಿಡ್ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಹತ್ತು ಸಲಹೆ ನೀಡಿದ್ರು ಹೆಚ್ಡಿಕೆ