ETV Bharat / state

ವಿಶ್ವನಾಥ್​​ ರಾಜಕೀಯದ ಕೊನೆಯ ದಿನಗಳಲ್ಲಿದ್ದಾರೆ: ದಿನೇಶ್ ಗುಂಡೂರಾವ್

ಹಲ್ಲೆಗೊಳಗಾದ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅನರ್ಹ ಶಾಸಕ ವಿಶ್ವನಾಥ್ ರಾಜಕೀಯ ಮೌಲ್ಯ ಹಾಗೂ ಸಿದ್ಧಾಂತವಿಲ್ಲದೆ ರಾಜಕೀಯದ ಕೊನೆಯ ದಿನಗಳಲ್ಲಿ ಇದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
author img

By

Published : Nov 24, 2019, 12:44 PM IST

ಮೈಸೂರು: ಅನರ್ಹ ಶಾಸಕ ವಿಶ್ವನಾಥ್ ಅವರು ರಾಜಕೀಯ ಮೌಲ್ಯ ಹಾಗೂ ಸಿದ್ಧಾಂತವಿಲ್ಲದೆ ರಾಜಕೀಯದ ಕೊನೆಯ ದಿನಗಳಲ್ಲಿ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ರು.

ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮ ಎಲ್ಲಾ ನಾಯಕರು ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುತ್ತಿದ್ದು, ಕಾಂಗ್ರೆಸ್​​ಗೆ ಒಳ್ಳೆಯ ಫಲಿತಾಂಶ ನೀಡಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸಿದ್ದರಾಮಯ್ಯ ಈಗಾಗಲೇ ಒಂದು ಸುತ್ತು ಹುಣಸೂರಿನಲ್ಲಿ ಪ್ರಚಾರ ಮುಗಿಸಿದ್ದು, ಇಂದಿನಿಂದ ಡಿಕೆಶಿ ಪ್ರಚಾರಕ್ಕೆ ಬರುತ್ತಿದ್ದಾರೆ. ಬಿಜೆಪಿಯವರು ಸುಖಾಸುಮ್ಮನೆ ಸಿದ್ದರಾಮಯ್ಯ ಏಕಾಂಗಿ ಎಂದು ಹೇಳುವ ಮೂಲಕ ತಾವು ಮಾಡಿದ ಸಂವಿಧಾನ ಬಾಹಿರ ಕೆಲಸಗಳನ್ನು ಮುಚ್ಚಿಕೊಳ್ಳುವ ಕೆಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅನರ್ಹ ಶಾಸಕರ ಬಗ್ಗೆ ಜನರಲ್ಲಿ ಬೇಸರವಿದೆ. ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಬಿಜೆಪಿಗೆ ಮುಖಭಂಗವಾಗಲಿದೆ ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ರು.

Intro:ಮೈಸೂರು: ಈಗ ವಿಶ್ವನಾಥ್ ಅವರ ರಾಜಕೀಯ ಮೌಲ್ಯ ಹಾಗೂ ಸಿದ್ದಾಂತವಿಲ್ಲದೆ ಅವರು ರಾಜಕೀಯ ಮತ್ತು ರಾಜಕಾರಣದ ಕೊನೆಯ ದಿನಗಳಲ್ಲಿ ಇದ್ದಾರೆ ಈ ಚುನಾವಣೆ ಅವರಿಗೆ ಕೊನೆಯ ಚುನಾವಣೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.

Body:ಇಂದು ಹಲ್ಲೆಗೊಳಗಾದ ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಮ್ಮ ಎಲ್ಲಾ ನಾಯಕರು ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುತ್ತಿದ್ದು ಈ ಚುನಾವಣೆ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ನೀಡಲಿದೆ.
ಸಿದ್ದರಾಮಯ್ಯ ಈಗಾಗಲೇ ೧ ಸುತ್ತು ಹುಣಸೂರಿನಲ್ಲಿ ಪ್ರಚಾರ ಮುಗಿಸಿದ್ದು, ಇಂದಿನಿಂದ ಡಿಕೆಶಿ ಪ್ರಚಾರಕ್ಕೆ ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರದ ಉಸ್ತುವಾರಿ ಇರುವುದರಿಂದ ಬಿಜಿ ಇದ್ದಾರೆ, ಸುಮ್ಮ ಸುಮ್ಮನೆ ಬಿಜೆಪಿ ಅವರು ಸಿದ್ದರಾಮಯ್ಯ ಏಕಾಂಗಿ ಎಂದು ಹೇಳುವ ಮೂಲಕ ಟಾರ್ಗೆಟ್ ಮಾಡುತ್ತಾರೆ. ತಾವು ಮಾಡಿದ ಸಂವಿಧಾನ ಬಾಹಿರ ಕೆಲಸಗಳನ್ನು ಮುಚ್ಚಿಕೊಳ್ಳಲು ಈ ರೀತಿ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ರಾತ್ರಿ ಮಾಡುತ್ತಾರೆ ಹಾಗೂ ರಾಜ್ಯಪಾಲರ ಆಡಳಿತ ಜಾರಿ ಮಾಡುತ್ತಾರೆ. ‌ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ತೆರವು ಗೊಳಿಸುತ್ತಾರೆ ಇದನ್ನು ಚಾಣಾಕ್ಷತನ ಎನ್ನುತ್ತಾರೆ ಅದನ್ನು ಉದಟ್ಟತನದ ನಡವಳಿಕೆ ಹಾಗೂ ಮೌಲ್ಯ ಬಿಟ್ಟು, ಕಾನೂನನ್ನು ಮುರಿದು ಬಿಜೆಪಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಪಕ್ಷಾಂತರ ಹಾಗೂ ಅನರ್ಹರ ಬಗ್ಗೆ ಜನರಲ್ಲಿ ಬೇಸರವಿದೆ. ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಹಾಗು ಈ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುತ್ತದೆ ಎಂದರು.

ಇನ್ನೂ ಹೆಚ್. ವಿಶ್ವನಾಥ್ ಬಗ್ಗೆ ಮೊದಲು ಗೌರವವಿತ್ತು ಈಗ ಅದನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ನಲ್ಲಿದ್ದಾಗ ರಾಜಕೀಯ ಜೀವನ ಎತ್ತರದಲ್ಲಿತ್ತು ಈಗ ಪಾತಾಳಕ್ಕೆ ಇಳಿದಿದೆ. ‌ಮೌಲ್ಯ ಸಿದ್ದಾಂತಗಳು ಅವರಲ್ಲಿ ಇಲ್ಲ, ಸ್ವಾರ್ಥವೇ ತುಂಬಿದ್ದು ಅವರ ಮಾತಿಗೆ ಬೆಲೆಯಿಲ್ಲ, ಅವರು ರಾಜಕೀಯ ಹಾಗೂ ರಾಜಕಾರಣದ ಕೊನೆಯ ದಿನಗಳು ಇವು ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.