ಮೈಸೂರು: ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವೆ ಸಣ್ಣಪುಟ್ಟ ವೈಮನಸ್ಸು ಇದೆ. ಅದನ್ನು ಬಿಟ್ಟರೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ಇಲ್ಲ. ಅದನ್ನು ಸರಿಪಡಿಸುತ್ತೇವೆ. ಜಿಲ್ಲಾಧಿಕಾರಿ ಕೋವಿಡ್ ನಿವಾರಣೆಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಇಂದು ಸಾರಿಗೆ ಬಸ್ಗಳನ್ನು ಆಕ್ಸಿಜನ್ ಬಸ್ಗಳಾಗಿ ಪರಿವರ್ತಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯದ ಕೊರತೆಯಿಲ್ಲ. ಸಣ್ಣಪುಟ್ಟ ವೈಮನಸ್ಸು ಇದೆ. ಅದನ್ನು ಸರಿಪಡಿಸುತ್ತೇವೆ. ಅದನ್ನು ಬಿಟ್ಟರೆ ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರು ಹಾಗೂ ಪೊಲೀಸರು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್ ಕೋವಿಡ್ ಸೋಂಕು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಕೊರೊನಾ ಮತ್ತು ಬ್ಲಾಕ್ ಫಂಗಸ್ ಜಾಸ್ತಿಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸಲಹೆ ಕೊಡುತ್ತಾರೆ. ಅದನ್ನು ಉಸ್ತುವಾರಿ ಸಚಿವನಾದ ನಾನು ಪಾಲನೆ ಮಾಡುವುದು ನನ್ನ ಕರ್ತವ್ಯ. ಇಲ್ಲಿ ಯಾವುದೇ ಪ್ರೆಸ್ಟೀಜ್ ಪ್ರಶ್ನೆ ಇಲ್ಲ. ಟಾಸ್ಕ್ ಫೋರ್ಸ್ ರಚನೆಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳುವ ವ್ಯಕ್ತಿಗೆ, ಹೀಗೆ ಹೇಳುವ ಅಧಿಕಾರ ಕೊಟ್ಟವರು ಯಾರು? ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ಗೆ ಪರೋಕ್ಷ ಟಾಂಗ್ ನೀಡಿದರು. ಟಾಸ್ಕ್ ಫೋರ್ಸ್ ಎಂಬುವುದು ಜವಾಬ್ದಾರಿ ಕೊಟ್ಟು ಸೇವೆ ಮಾಡುತ್ತಿದ್ದಾರೆ. ಅವರಿಗೆ ನಾವು ಟಿಎ, ಡಿಎ ಕೊಡುವುದಿಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.