ಮೈಸೂರು: ಮೊಬೈಲ್ ಶಾಪ್ನಲ್ಲಿ ಐಫೋನ್ಗಳನ್ನೇ ಹೆಚ್ಚಾಗಿ ಕದ್ದು ಪರಾರಿಯಾಗಿರುವ ಘಟನೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಕುವೆಂಪು ನಗರದಲ್ಲಿ ನ್ಯೂ ಕಾಂತರಾಜ್ ಅರಸು ರಸ್ತೆಯ ಅಕ್ಷಯ ಭಂಡಾರ್ ಸರ್ಕಲ್ ಬಳಿ ಇರುವ ಎಸ್.ಶಾಪಿ ಡಾಟ್ ಕಾಂ ಪ್ರೈವೇಟ್ ಲಿಮಿಟೆಡ್ ರಿಟೇಲ್ ಮೊಬೈಲ್ ಶೋ ರೂಮ್ನಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಬೀಗ ಮುರಿದು ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ಈ ಕುರಿತು ಕುವೆಂಪು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ನಾಲ್ವರು ಕಳ್ಳರು ಮುಂಜಾನೆ 5.30ರ ಸಮಯದಲ್ಲಿ ದುಬಾರಿ ಐಫೋನ್ಗಳನ್ನು ಚೀಲಕ್ಕೆ ತುಂಬಿಕೊಂಡು ಸುಮಾರು 39 ಐಫೋನ್ಗಳನ್ನು ಹಾಗೂ ಇತರ ಒನ್ ಪ್ಲಸ್, ಒಪೋ ಮತ್ತು ರಿಯಲ್ ಮಿ ಫೋನ್ಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. 39 ಐಫೋನ್ ಸೇರಿ 33 ಲಕ್ಷ ರೂ. ಮೌಲ್ಯದ 60 ಮೊಬೈಲ್ಗಳನ್ನು ಕದ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.