ETV Bharat / state

ಆನ್​ಲೈನ್​ನಲ್ಲೂ ಮೈಸೂರು ರೈಲ್ವೆ ಮ್ಯೂಸಿಯಂ ವೀಕ್ಷಣೆಗೆ ವ್ಯವಸ್ಥೆ! - History of Railways

ಸಾಂಸ್ಕೃತಿಕ ನಗರಿಯಲ್ಲಿ ಆರಂಭವಾಗಿರುವ ರೈಲ್ವೆ ಮ್ಯೂಸಿಯಂ ವೀಕ್ಷಣೆ ಇನ್ನು ಮುಂದೆ ಆನ್​​ಲೈನ್​​ನಲ್ಲೂ ಲಭ್ಯವಾಗಲಿದೆ. ದೇಶದ ರೈಲ್ವೆ ಇತಿಹಾಸ ಸಾರುವ ಮ್ಯುಸಿಯಂ ಆರಂಭವಾಗಿದ್ದು, ಪ್ರವಾಸಿಗರಿಗೆ ಆನ್​​ಲೈನ್​ನಲ್ಲಿಯೇ ವೀಕ್ಷಿಸುವ ವ್ಯವಸ್ಥೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ.

the-mysore-railway-museum-is-also-open-for-online-viewing
ಆನ್​​​​ಲೈನ್​ ವೀಕ್ಷಣೆಗೂ ಲಭ್ಯವಾಗಲಿದೆ ಮೈಸೂರು ರೈಲ್ವೆ ಮ್ಯೂಸಿಯಂ
author img

By

Published : Sep 3, 2020, 3:16 PM IST

ಮೈಸೂರು: ಕೊರೊನಾ ಪಿಡುಗಿನ ಹಿನ್ನೆಲೆ ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಸೊರಗಿವೆ. ಇನ್ನು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಆರಂಭಿಸಲಾಗಿರುವ ಪಾರಂಪರಿಕ ರೈಲ್ವೆ ಮ್ಯೂಸಿಯಂಅನ್ನು ಪ್ರವಾಸಿಗರ ಅನುಕೂಲಕ್ಕಾಗಿ ಆನ್​​​​ಲೈನ್​ನಲ್ಲೂ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶದ ಪಾರಂಪರಿಕ ರೈಲ್ವೆ ನಿಲ್ದಾಣದಲ್ಲಿ ಒಂದಾದ ಸಾಂಸ್ಕೃತಿಕ ನಗರಿಯ ರೈಲ್ವೆ ನಿಲ್ದಾಣ ಬೆಳೆದು ಬಂದ ಇತಿಹಾಸ ಕುರಿತ ದೊಡ್ಡ ಸಂಗ್ರಹಾಲಯವೇ ಈ ಮ್ಯೂಸಿಯಂನಲ್ಲಿದೆ. ಇಲ್ಲಿ ಕೋಚ್ ಕೆಫೆ, ಆಡಿಯೋ ವಿಡಿಯೋ ದೃಶ್ಯ ಕೇಂದ್ರ ರೈಲ್ವೆ ಇತಿಹಾಸದಿಂದ ಇಲ್ಲಿಯವರೆಗಿನ ವಿವಿಧ ಬಗೆಯ ಉಗಿಬಂಡಿಗಳು, ಡ್ರ್ಯಾಗನ್ ಹಾಗೂ ದೂರ ಸಂಪರ್ಕದ ಹಳೆಯ ಉಪಕರಣಗಳು ಈ ಮ್ಯೂಸಿಯಂನಲ್ಲಿ‌ ಇಡಲಾಗಿದೆ. ಮೈಸೂರಿನ ರಾಜ ಕುಟುಂಬದ ಪ್ರಾಚೀನ ವಸತಿ ಕೊಠಡಿಗಳು ಹಾಗೂ ಅಪರೂಪದ ಚಿತ್ರಗಳು ಇಲ್ಲಿ ಕಾಣಸಿಗುತ್ತದೆ.

ಆನ್​​​​ಲೈನ್​ ವೀಕ್ಷಣೆಗೂ ಲಭ್ಯವಾಗಲಿದೆ ಮೈಸೂರು ರೈಲ್ವೆ ಮ್ಯೂಸಿಯಂ

ಕೇಂದ್ರ ಸಚಿವರಿಂದ ಉದ್ಘಾಟನೆಗೆ ಚಿಂತನೆ:

ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನ ಈ ರೈಲ್ವೆ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡಲು ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಮತ್ತು ಸಿಟಿ ರವಿ ಅವರ ಸಮಯವನ್ನು ಕೇಳಲಾಗಿದ್ದು, ಅವರು ಸಮಯ ಕೊಟ್ಟ ನಂತರ ಉದ್ಘಾಟನೆ ಮಾಡಿಸಲಾಗುವುದು ಎಂದರು.

ಮೈಸೂರನ್ನು ನೋಡಲು ಬರುವ ಪ್ರವಾಸಿಗರು ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಜೊತೆಗೆ ಇನ್ನು ಮುಂದೆ ರೈಲ್ವೆ ಮ್ಯೂಸಿಯಂ ಅನ್ನು ನೋಡಬಹುದು. ಅಲ್ಲದೆ ಮ್ಯೂಸಿಯಂ ಅನ್ನು ಚೆನ್ನಾಗಿ ಅಭಿವೃದ್ಧಿ ಪಡಿಸಿರುವ ನೈರುತ್ಯ ರೈಲ್ವೆ ಮೈಸೂರು ವಿಭಾಗಿಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಅವರಿಗೆ ಧನ್ಯವಾದ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.