ETV Bharat / state

ಮೈಸೂರು-ಬೆಂಗಳೂರು ದಶಪಥ ಯೋಜನೆ 2022ರೊಳಗೆ ಪೂರ್ಣಗೊಳ್ಳಲಿದೆ: ಸಂಸದ ಪ್ರತಾಪ್​ ಸಿಂಹ - 7,400 crore. A massive scheme of sums

ದಶಪಥ ರಸ್ತೆ ಕಾಮಗಾರಿ ವಿಚಾರದಲ್ಲಿ ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನಗೆ ಅಭಿವೃದ್ಧಿಯಷ್ಟೇ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಈ ಭಾಗದ ಜನರಿಗೆ ಅನುಕೂಲವಾಗಲಿ ಎಂದು ಬಹುದೊಡ್ಡ ಯೋಜನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅದು ಸಾಕಾರಗೊಳ್ಳಬೇಕೆಂಬುದಷ್ಟೇ ನನ್ನ ಧ್ಯೇಯ ಎಂದು ಪ್ರತಾಪ್​​ ಸಿಂಹ ಸ್ಪಷ್ಟಪಡಿಸಿದರು.

ಪ್ರತಾಪ್​ ಸಿಂಹ
ಪ್ರತಾಪ್​ ಸಿಂಹ
author img

By

Published : Nov 14, 2020, 10:38 PM IST

ಮೈಸೂರು: ಬೆಂಗಳೂರು-ಮೈಸೂರು ದಶಪಥ ಯೋಜನೆಯು 2022ರ ಸೆಪ್ಟೆಂಬರ್​​ ಮುಂಚೆಯೇ ಪೂರ್ಣಗೊಳ್ಳಲಿದೆ. ಯೋಜನೆಯ ಪ್ರಾಜೆಕ್ಟ್​ ಡೈರೆಕ್ಟರ್​ ಶ್ರೀಧರ್​ ಕನ್ನಡಿಗರು. ಇವರ ಶ್ರಮದಿಂದ ಎರಡೂ ಹಂತದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಶಪಥ ರಸ್ತೆ ಕಾಮಗಾರಿ ವಿಚಾರದಲ್ಲಿ ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನಗೆ ಅಭಿವೃದ್ಧಿಯಷ್ಟೇ ಮುಖ್ಯ. ಪ್ರಧಾನಿ ನರೇಂದ್ರ ಮೋದಿ ಈ ಭಾಗದ ಜನರಿಗೆ ಅನುಕೂಲವಾಗಲಿ ಎಂದು ಬಹುದೊಡ್ಡ ಯೋಜನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅದು ಸಾಕಾರಗೊಳ್ಳಬೇಕೆಂಬುದಷ್ಟೇ ನನ್ನ ಧ್ಯೇಯ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ

ಈ ಯೋಜನೆಯು 2022ರ ಸೆಪ್ಟೆಂಬರ್​​ ಮುಂಚೆಯೇ ಪೂರ್ಣಗೊಳ್ಳಲಿದೆ. 7,400 ಕೋಟಿ ರೂ. ಮೊತ್ತದ ಬೃಹತ್​ ಯೋಜನೆಯಾಗಿದ್ದು, ಬೆಂಗಳೂರಿನಿಂದ ನಿಡಘಟ್ಟಕ್ಕೆ ಮೊದಲ ಹಂತದ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಎಲಿಯೂರು ಗ್ರಾಮದ ಓವರ್​ ಬ್ರಿಡ್ಜ್​ ನನ್ನ ಕ್ಷೇತ್ರಕ್ಕೆ ಬಾರದಿದ್ದರೂ ಮಂಡ್ಯ ಜನರ ಒಳಿತಿಗಾಗಿ ಅದಕ್ಕೆ ಒಪ್ಪಿಗೆ ಕೊಡಿಸಿದ್ದೇನೆ. ಶಿವರಾಮೇಗೌಡರು ಮಂಡ್ಯ ಸಂಸದರಾಗಿದ್ದಾಗ ಪಾಸ್​​ಪೋರ್ಟ್​ ಸೇವಾ ಕೇಂದ್ರ ಹೇಗೆ ಮಂಜೂರು ಮಾಡಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ ಮಂಜೂರು ಮಾಡಿಸಿದೆ. ಅಲ್ಲಿನ ಕೆಲವರ ಒಳ ರಾಜಕೀಯದಿಂದ ಮಂಡ್ಯ ಬದಲು ಮದ್ದೂರಿನಲ್ಲಿ ಕೇಂದ್ರ ತೆರೆಯಲಾಗಿದೆ‌ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.