ಮೈಸೂರು : ನಗರೀಕರಣ ಪರೀಣಾಮ ನಗರದಲ್ಲಿನ ಆಟದ ಮೈದಾನಗಳು ಮರೆಯಾಗುತ್ತಿವೆ. ಮಕ್ಕಳು ಆಟವಾಡಲು ಜಾಗವಿಲ್ಲದೇ ರಸ್ತೆಗಳಲ್ಲಿ ಹಾಗೂ ಪಾರ್ಕ್ಗಳಲ್ಲಿ ಇತರೆ ಪಾಳುಬಿದ್ದ ಪ್ರದೇಶಗಳಲ್ಲಿ ಸಮಯ ಕಳೆಯುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ಆಟದ ಮೈದಾನಗಳನ್ನೂ ಬಿಡದೇ ವಾಣಿಜ್ಯ ಕಟ್ಟಡಗಳು, ಅಪಾರ್ಟ್ಮೆಂಟ್ಗಳನ್ನು ಕಟ್ಟುತ್ತಿರುವುದರಿಂದ ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗಿದೆ. ಕೆಲವೆಡೆ ಮೈದಾನಗಳಲ್ಲಿ ಆಟವಾಡಲು ಶುಲ್ಕ ವಿಧಿಸಲಾಗುತ್ತಿದೆ. ಹಾಗಾಗಿ, ಮಕ್ಕಳು ನಗರದೊಳಗೆ ಇರುವ ಪಾರ್ಕ್ಗಳನ್ನು ಮೈದಾನಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಪರಿಸರವಾದಿ ರಾಜ್‌ಕುಮಾರ್, ನಗರಗಳಲ್ಲಿ ಇತ್ತೀಚೆಗೆ ಆಟದ ಮೈದಾನಗಳು ಮಾಯವಾಗುತ್ತಿವೆ. ಮೈಸೂರು ನಗರದಲ್ಲಿ ರಾಜರು ಉತ್ತಮ ರಸ್ತೆ ಮತ್ತು ಮೈದಾನ ನಿರ್ಮಾಣ ಮಾಡಿದ್ದರು. ಆದರೆ, ಇತ್ತೀಚೆಗೆ ಮೈದಾನಗಳನ್ನು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.