ETV Bharat / state

ಮುಂದಿನ 6 ವರ್ಷ ಅಂಬಾರಿ ಹೊರಲಿದ್ದಾನೆ ‘ಆಪರೇಷ‌ನ್‌ ಕಿಂಗ್ ಅಭಿಮನ್ಯು’

ಇನ್ನೂ 6 ವರ್ಷಗಳ ಕಾಲ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಮುಂದಿನ ವರ್ಷ ಕೋವಿಡ್ ಎಲ್ಲಾ ಮುಗಿದು ಅದ್ಧೂರಿಯಾಗಿ ದಸರಾ ಆಚರಿಸೋಣ. ಬನ್ನಿ ಮಂಟಪದವರೆಗೆ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ ಎಂದು ಪಶು ವೈದ್ಯ ಡಾ.ನಾಗರಾಜ್ ಹೇಳಿದರು.

author img

By

Published : Oct 27, 2020, 4:04 PM IST

Updated : Oct 27, 2020, 5:34 PM IST

ಮುಂದಿನ 6 ವರ್ಷಗಳ ಕಾಲ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

ಮೈಸೂರು: 54 ವರ್ಷದ ಅಭಿಮನ್ಯು ಆನೆ ಮುಂದಿನ 6 ವರ್ಷಗಳ ಕಾಲ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿದ್ದಾನೆ ಎಂದು ಪಶು ವೈದ್ಯ ಡಾ.ನಾಗರಾಜ್ ತಿಳಿಸಿದರು.

ಇಂದು ಗಜಪಡೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಅಭಿಮನ್ಯು ಆನೆಗೆ 54 ವರ್ಷ. 60 ವರ್ಷಗಳವರೆಗೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿದ್ದು, ಇನ್ನೂ 6 ವರ್ಷಗಳ ಕಾಲ ಆತನೇ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಮುಂದಿನ ವರ್ಷ ಕೋವಿಡ್ ಎಲ್ಲಾ ಮುಗಿದು ಅದ್ಧೂರಿಯಾಗಿ ದಸರಾ ಆಚರಿಸೋಣ. ಬನ್ನಿ ಮಂಟಪದವರೆಗೆ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ ಎಂದು ಹೇಳಿದರು.

ಡಾ.ನಾಗರಾಜ್ ಮೊದಲ ಬಾರಿಗೆ ಅಭಿಮನ್ಯು ತನಗೆ ವಹಿಸಿದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಆತ ನಿನ್ನೆ ನಿರ್ವಹಿಸಿದ ರೀತಿ ತುಂಬಾ ಖುಷಿಯಾಗಿದೆ. ಚಿನ್ನದ ಅಂಬಾರಿ ಈ ಬಾರಿ ಸರಿಯಾಗಿ ಕುಳಿತಿತ್ತು. ಸರಳ ದಸರಾ ತುಂಬಾ ಅಚ್ಚುಕಟ್ಟಾಗಿ ನಡೆದಿದೆ ಎಂದು ಪಶು ವೈದ್ಯ ಡಾ.ನಾಗರಾಜ್ ವಿವರಿಸಿದರು.

Last Updated : Oct 27, 2020, 5:34 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.