ETV Bharat / state

ಮರು ಸ್ಥಾಪನೆ ಮಾಡಿದ್ರೆ ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ: ಯದುವೀರ್​

ದೇವರಾಜ ಮಾರುಕಟ್ಟೆಯನ್ನು ಮರುಸ್ಥಾಪನೆ ಮಾಡಿದರೆ ಇನ್ನೂ 100 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ರಾಜವಂಶಸ್ಥ ಯದುವೀರ್ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

author img

By

Published : Jun 16, 2019, 11:54 AM IST

ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ

ಮೈಸೂರು: ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್ ಸಂದರ್ಶನದಲ್ಲಿ ನಗರದ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂಬ ವರದಿಯ ಹಿನ್ನೆಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ವ್ಯಾಪಾರಸ್ಥರೊಂದಿಗೆ ಮಾರುಕಟ್ಟೆಯನ್ನು ಪರಿಶೀಲನೆ ನಡೆಸಿದ್ರು.

ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ

ಇಲ್ಲಿ ಪಾರಂಪರಿಕ ತಜ್ಞರು ಪರಿಶೀಲನೆ ನಡೆಸಿ ಇದನ್ನು ಸರಿಯಾದ ರೀತಿಯಲ್ಲಿ ಸರಿ ಪಡಿಸಿದರೆ ಇನ್ನೂ 100 ವರ್ಷಗಳ ಕಾಲ ಈ ದೇವರಾಜ ಮಾರುಕಟ್ಟೆ ಬಾಳುತ್ತದೆ ಎಂದು ಒಡೆಯರು ತಿಳಿಸಿದ್ರು. ‌ಆದರೆ ಮಹಾನಗರ ಪಾಲಿಕೆಯವರು ಕೋರ್ಟ್ ಆದೇಶದ ಬಗ್ಗೆ ಸರಿಯಾಗಿ ತಿಳಿಸುತ್ತಿಲ್ಲ. ನಮ್ಮ ಕಡೆಯಿಂದ ಸರ್ಕಾರಕ್ಕೆ ಒಂದು ಮನವಿ ಎಂದರೆ ದೇವರಾಜ ಮಾರುಕಟ್ಟೆ ಮೈಸೂರಿನ ಗುರುತು ಇದ್ದಂತೆ. ಅರಮನೆಯ ಸುತ್ತ ಇರುವ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಅದನ್ನು ಸಂರಕ್ಷಿಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ನಾವು ಕೂಡ ಇವರ ಜೊತೆ ಇರುತ್ತೇವೆ.‌ಈ ಕಟ್ಟಡದ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೊ ಆ ನಂತರ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪಾರಂಪರಿಕ ಕಟ್ಟಡಗಳ ಸಮಿತಿಯ ಸದಸ್ಯರು ಇಲ್ಲಿಗೆ ಬಂದು ನೋಡಿದರೆ, ನಾನು ಸಹ ಬರುತ್ತೇನೆ ಇದರ ಬಗ್ಗೆ ತಿಳಿಸಿಕೊಡುತ್ತೇನೆ . ದೇವರಾಜ ಮಾರುಕಟ್ಟೆಯ ನೆಲಸಮದ ಮುಂಚೆ ಪಾರಂಪರಿಕ ಕಟ್ಟಡಗಳ ಸಮಿತಿಯಲ್ಲಿ ಸರಿಯಾದ ವಾಸ್ತುಶಿಲ್ಪಿಗಳು ಇದ್ದರೆ ಇದನ್ನು ನೋಡಲಿ. ಆಮೇಲೆ ಅವರೇ ಈ ಕಟ್ಟಡವನ್ನು ಕೆಡಗುವುದು ಅಥವಾ ಮರು ಸ್ಥಾಪನೆ ಮಾಡಬಹುದಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದ್ರು.

Intro:ಮೈಸೂರು: ದೇವರಾಜ ಮಾರುಕಟ್ಟೆಯನ್ನು ಮರುಸ್ಥಾಪನೆ ಮಾಡಿದರೆ ಇನ್ನೂ ೧೦೦ ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ರಾಜವಂಶಸ್ಥ ಯದುವೀರ್ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

Body:ಈ ಟಿವಿ ಭಾರತ್ ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್ ಸಂದರ್ಶನದಲ್ಲಿ ನಗರದ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂಬ ವರದಿಯ ಹಿನ್ನಲೆಯಲ್ಲಿ ರಾಜ ವಂಶಸ್ಥ ಯದುವೀರ್ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ವ್ಯಾಪಾರಸ್ಥರೊಂದಿಗೆ ಮಾರುಕಟ್ಟೆಯನ್ನು ಪರಿಶೀಲನೆ ನಡೆಸಿದ ನಂತರ ಈ ಟಿವಿ ಭಾರತ್ ಜೊತೆ ಮಾತನಾಡಿ ಈ ಮಾರುಕಟ್ಟೆ ಹಾಗೂ ಲ್ಯಾನ್ಸ್ಟೋನ್ ಬಿಲ್ಡಿಂಗ್ ಗಳನ್ನು ಪಾರಂಪರಿಕ ಕಟ್ಟಡಗಳ ಸಮಿತಿಯ ಸಲಹೆಯಂತೆ ತಿರ್ಮಾನ ಕೈಗೊಳ್ಳಿ ಎಂದು ಕೋರ್ಟ್ ಅಭಿಪ್ರಾಯ ಕೊಟ್ಟು ಆದೇಶ ನೀಡಿದೆ.
ಅದರಂತೆ ಇಲ್ಲಿ ಪಾರಂಪರಿಕ ತಜ್ಞರು ಪರಿಶೀಲನೆ ನಡೆಸಿ ಇದನ್ನು ಸರಿಯಾದ ರೀತಿಯಲ್ಲಿ ಸರಿ ಪಡಿಸಿದರೆ ಇನ್ನೂ ೧೦೦ ವರ್ಷ ಬಾಳುತ್ತದೆ ಎಂದು ಹೇಳಿದ್ದಾರೆ.‌ಆದರೆ ಮಹಾನಗರ ಪಾಲಿಕೆಯವರು ಕೋರ್ಟ್ ನ ಆದೇಶದ ಬಗ್ಗೆ ಸರಿಯಾಗಿ ತಿಳಿಸುತ್ತಿಲ್ಲ. ನಮ್ಮ‌ ಕಡೆಯಿಂದ ಸರ್ಕಾರಕ್ಕೆ ಒಂದು ಮನವಿ ಎಂದರೆ ದೇವರಾಜ ಮಾರುಕಟ್ಟೆ ಮೈಸೂರಿನ ಗುರುತು ಇದ್ದ ಹಾಗೇ. ಅರಮನೆಯ ಸುತ್ತ ಇರುವ ಪಾರಂಪರಿಕ ಕಟ್ಟಡಗಳಲ್ಲಿ ಇದು ಒಂದು ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಕೂಡ ಪಾರಂಪರಿಕತೆ ಇದ್ದ ಹಾಗೇ ನಡೆಯುತ್ತವೆ. ಅದನ್ನು ಸಂರಕ್ಷಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ನಾವು ಕೂಡ ಇವರ ಜೊತೆ ಇರುತ್ತೇವೆ.‌
ಇನ್ನೂ ಈ ಕಟ್ಟಡದ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೊ ಆ ನಂತರ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪಾರಂಪರಿಕ ಕಟ್ಟಡಗಳ ಸಮಿತಿಯ ಸದಸ್ಯರು ಇಲ್ಲಿಗೆ ಬಂದು ನೋಡಿದರೆ, ನಾನು ಸಹ ಬರುತ್ತೇನೆ ಇದರ ಬಗ್ಗೆ ತಿಳಿಸಿಕೊಡುತ್ತೇನೆ.
ಪಾರಂಪರಿಕ ಕಟ್ಟಡಗಳ ಸಮಿತಿಯಲ್ಲಿ ಸರಿಯಾದ ವಾಸ್ತುಶಿಲ್ಪಿಗಳು ಇದ್ದರೆ ನೋಡಿ ಅಮೇಲೆ ಅವರೇ ಈ ಕಟ್ಟಡವನ್ನು ಕೆಡವುದು ಅಥವಾ ಮರು ಸ್ಥಾಪನೆ ಮಾಡಬಹುದ ಎಂಬ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳಲಿ ಎಂದು ದೇವರಾಜ ಮಾರುಕಟ್ಟೆಯ ನೆಲಸಮದ ಮುಂಚೆ ಪಾರಂಪರಿಕ ತಜ್ಞರು ಬಂದು ನೋಡಲಿ ಎಂದು ಹೇಳಿದರು.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.