ಮೈಸೂರು : ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಎರಡು ಪಕ್ಷಗಳ ನಡುವೆ 5 ವರ್ಷಗಳ ಕಾಲ ಒಪ್ಪಂದವಾಗಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತುಕತೆಯಂತೆ 5 ವರ್ಷ ಪೂರೈಸಲಿದ್ದೇವೆ. ಇನ್ನು, 3 ವರ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಅನುದಾನ ಹಾಗೂ ಸಂಪನ್ಮೂಲದ ಕೊರತೆಯಿಂದ ಕೆಲಸ ಆಗುತ್ತಿಲ್ಲ ಎಂದು ಜೆಡಿಎಸ್ ಪಕ್ಷದವರಿಗೆ ಬೇಸರ ಬಂದಿರಬಹುದು.
ಅದಕ್ಕಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೀವಿ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸಹಜ ಪ್ರಕ್ರಿಯೆ ಎಂದರು. ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪ್ರಕಟಗೊಂಡ ಬಳಿಕ ಶಾಸಕರಾದ ಸಾ ರಾ ಮಹೇಶ್ ಹಾಗೂ ಜಿ ಟಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿ, ಮೈತ್ರಿ ಮುಂದುವರಿಯುವಂತೆ ಮಾಡುತ್ತೇನೆ ಎಂದು ತಿಳಿಸಿದರು.
ಓದಿ: ಬಿಜೆಪಿಯಲ್ಲಿದ್ದು ಮೂಲೆ ಗುಂಪಾಗಿದ್ದೀರಿ, ಕಾಂಗ್ರೆಸ್ಗೆ ಬನ್ನಿ: ಯತ್ನಾಳ್ಗೆ ತನ್ವೀರ್ ಸೇಠ್ ಆಹ್ವಾನ