ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡಿರುವ ಆಹಾರಧಾನ್ಯವನ್ನು ಎತ್ತಿನಗಾಡಿ ಮೂಲಕ ವಿತರಣೆ ಮಾಡಿ, ತುಂಬಲ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ಮಾದರಿಯಾಗಿದ್ದಾರೆ.
ಶಾಲೆಯ ಪ್ರತಿಯೊಂದು ವಿದ್ಯಾರ್ಥಿ ಮನೆಗೆ ತೆರಳಿ ಪಠ್ಯ ಬೋಧಿಸುತ್ತಿದ್ದಾರೆ. ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ ಎಂದರೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಅಚ್ಚುಮೆಚ್ಚು ಆಗಿದ್ದಾರೆ. ಸರ್ಕಾರಿ ಸಂಬಳ ಪಡೆದು ಕೇವಲ ಶಾಲೆಗಷ್ಟೇ ಸೀಮಿತವಾಗುವ ಸಹಸ್ರಾರು ಶಿಕ್ಷಕರ ನಡುವೆ ರಾಯಪ್ಪ ಗೌಂಡಿ ಮಾದರಿಯಾಗಿದ್ದಾರೆ.