ETV Bharat / state

ನಮ್ಮ ಜೊತೆ ಯಾರು ಬೇಕಾದ್ರೂ ಕೈ ಜೋಡಿಸಬಹುದು: ಜಿಟಿಡಿ-ಡಿಕೆಶಿ ಭೇಟಿಗೆ ತನ್ವೀರ್ ಸೇಠ್​ ಮಾರ್ಮಿಕ ಉತ್ತರ - Mysore News

ಕಾಂಗ್ರೆಸ್ ಸಮಬಾಳು, ಸಮಪಾಲು ಹಾಗೂ ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇರುವ ಪಕ್ಷ. ಜಿ.ಟಿ ದೇವೇಗೌಡರವರು ಡಿಕೆಶಿ ಭೇಟಿ ಮಾಡಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಕದ್ದುಮುಚ್ಚಿ ಮಾರಾಟ ಆಗಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಶಾಸಕ ತನ್ವೀರ್ ಸೇಠ್ ಹೇಳಿಕೆ
ಶಾಸಕ ತನ್ವೀರ್ ಸೇಠ್ ಹೇಳಿಕೆ
author img

By

Published : Oct 7, 2020, 3:17 PM IST

ಮೈಸೂರು: ಸಿದ್ದಾಂತ ಒಪ್ಪಿಕೊಂಡು ಯಾರು ಎಲ್ಲಿಗೆ ಬೇಕಾದರೂ ಬರಬಹುದು. ಕಾಂಗ್ರೆಸ್ ಸಮಬಾಳು, ಸಮಪಾಲು ಹಾಗೂ ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇರುವ ಪಕ್ಷ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಈ ಹೇಳಿಕೆ ನೀಡಿದರು.

ಜಿ.ಟಿ ದೇವೇಗೌಡರವರು ಡಿಕೆಶಿ ಭೇಟಿ ಮಾಡಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಕದ್ದುಮುಚ್ಚಿ ಮಾರಾಟ ಆಗಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನಮ್ಮ ಜೊತೆ ಯಾರು ಬೇಕಾದರೂ ಕೈಜೋಡಿಸಬಹುದು ಎಂದು ಮಾರ್ಮಿಕವಾಗಿ ಹೇಳಿದ ಅವರು ಜಿ.ಟಿ ದೇವೇಗೌಡ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದರು.

ಶಾಸಕ ತನ್ವೀರ್ ಸೇಠ್ ಹೇಳಿಕೆ

ಇನ್ನು ಸರ್ಕಾರ ಸರಳ ಹಾಗೂ ಸಾಂಪ್ರದಾಯಿಕವಾಗಿ ಅರಮನೆ ಮತ್ತು ಚಾಮುಂಡೇಶ್ವರಿ ಪೂಜೆ ಮಾಡುವುದಕ್ಕೆ ಒಪ್ಪಿದೆ. ಆದರೆ ಊರೆಲ್ಲಾ ದೀಪ ಹಾಕುವ ಅಗತ್ಯ ಇರಲಿಲ್ಲ. ಇನ್ನು ಶಾಲೆ ಆರಂಭಕ್ಕೆ ಆತುರ ಪಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪೋಷಕರು ಶಾಲೆ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.‌ ತಜ್ಞರು ಹಾಗೂ ಶಾಲಾ ಶಿಕ್ಷಣ ಸಂಸ್ಥೆಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂದರು.

ದಸರಾ ರಜೆಗಳನ್ನು ಕಡಿತಗೊಳಿಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಹೇಳಿಕೆ ನಗೆಪಾಟಲಿಗೆ ಎಡೆಮಾಡಿಕೊಡುತ್ತದೆ. ಸರ್ಕಾರ ಬಹಳ ಗಂಭೀರವಾಗಿ ಈ ವಿಚಾರ ಪರಿಗಣಿಸಿ ಮಕ್ಕಳ ಭವಿಷ್ಯ, ಅವರ ಪ್ರಾಣ ಮತ್ತು ಶೈಕ್ಷಣಿಕ ವರ್ಷ ನೋಡಿ ಚರ್ಚೆ ಮಾಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.