ಮೈಸೂರು: ಕೊರೊನಾದಿಂದ ಜನ ತತ್ತರಿಸಿ ಹೋಗಿದ್ದಾರೆ. ಅವರ ಪ್ರಾಣ ಉಳಿಸುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಆದರೆ ಇಂತಹ ಸಂದರ್ಭದಲ್ಲಿ ಐಎಎಸ್ ಅಧಿಕಾರಿಗಳು ಬೀದಿಯಲ್ಲಿ ನಿಂತು ಆರೋಪ-ಪ್ರತ್ಯಾರೋಪ ಮಾಡುವುದು ಶೋಭೆ ತರಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪನಾಗ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಒಬ್ಬರ ಮೇಲೆ ಜವಾಬ್ದಾರಿ ಕೊಟ್ಟಿದ್ದು ಎಡವಟ್ಟಿಗೆ ಕಾರಣವಾಗಿದೆ. ಸಿಎಸ್ಆರ್ ಫಂಡ್ ವಿಚಾರವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನಾನು ಯಾರ ಪರ, ಯಾರ ವಿರುದ್ಧವೂ ಅಲ್ಲ. ಅಧಿಕಾರಿಗಳು ಒಂದೇ ಕಡೆ ಶಾಶ್ವತವಾಗಿರುವುದಿಲ್ಲ. ಯಾರು ಇಲ್ಲಿ ಇರಬೇಕೆಂದು ತೀರ್ಮಾನ ಮಾಡುವುದು ಸರ್ಕಾರ. ಈ ಸಂಬಂಧ ಸತ್ಯ ಸಂಗತಿ ಹೊರಬರಬೇಕು. ವರ್ಗಾವಣೆ ಮಾಡ್ತಿರೋ, ತಿಳಿಹೇಳುತ್ತಿರೋ ನಿಮಗೆ ಬಿಟ್ಟದ್ದು. ವ್ಯಕ್ತಿ ಮುಖ್ಯವಲ್ಲ, ಜನರ ಸಮಸ್ಯೆ ಮುಖ್ಯ ಎಂದರು.
ಓದಿ: ಮೈಸೂರು ಡಿಸಿ ಸ್ವಿಮ್ಮಿಂಗ್ ಪೂಲ್ ವಿವಾದ: ತನಿಖೆಗೆ ಸರ್ಕಾರ ಆದೇಶ