ETV Bharat / state

ಮುಂದೊಂದು ದಿನ ಕನ್ನಡ ಸಿನಿಮಾದಲ್ಲಿ ನಟಿಸುವೆ: ತಮಿಳು ನಟ ವಿಶಾಲ್

author img

By

Published : Dec 15, 2022, 2:46 PM IST

Updated : Dec 15, 2022, 3:01 PM IST

ಕನ್ನಡ ಚಿತ್ರರಂಗವನ್ನು ಕೊಂಡಾಡಿರುವ ತಮಿಳು ಭಾಷೆಯ ನಟ ವಿಶಾಲ್, ಕನ್ನಡ ಚಿತ್ರದಲ್ಲಿ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದರು.

Tamil actor Vishal press conference in Mysore
ತಮಿಳು ನಟ ವಿಶಾಲ್

ತಮಿಳು ನಟ ವಿಶಾಲ್

ಮೈಸೂರು: ಚಿತ್ರರಂಗದಲ್ಲಿ ನಾನು ಪರಿಪೂರ್ಣ ನಾಯಕನಾದ ಬಳಿಕ ಮುಂದೊಂದು ದಿನ ಅಪ್ಪಟ ಕನ್ನಡ ಸಿನಿಮಾದಲ್ಲಿಯೇ ನಟಿಸಬೇಕೆಂಬ ಆಸೆ ಹೊಂದಿದ್ದೇನೆ ಎಂದು ತಮಿಳು ನಟ ವಿಶಾಲ್ ಅನಿಸಿಕೆ ಹೇಳಿಕೊಂಡರು. 'ಲಾಠಿ' ಸಿನಿಮಾದ ಪ್ರಮೋಷನ್​ಗಾಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋದು ನನ್ನ ತಂದೆಯ ಕನಸು. ತಂದೆ ಕನ್ನಡಿಗರಾಗಿರುವುದರಿಂದ ಆಸೆ ಪಡುತ್ತಿದ್ದಾರೆ. ಅವರ ಮನದಾಸೆ ಈಡೇರಿಸಲು ನಾನು ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ.

ಕನ್ನಡ ಚಿತ್ರರಂಗದಿಂದ ಈಗಾಗಲೇ ನನಗೆ ಆಫರ್​ ಬಂದಿದೆ. 2023ರಲ್ಲಿ ನಾನು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದೇನೆ. 2024ಕ್ಕೆ ಕನ್ನಡದಲ್ಲಿ ಸಿನಿಮಾ ಆಗುವ ಸಾಧ್ಯತೆ ಇದೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆ ಎಂದು ಕರ್ನಾಟಕ ಮತ್ತು ತಮ್ಮ ಕುಟುಂಬದ ನಡುವಿನ ಅವಿನಾಭಾವ ಸಂಬಂಧವನ್ನು ಹೇಳಿದರು.

ಇದೇ ಮೊದಲ ಬಾರಿಗೆ ವಿಶಾಲ್ ಅವರ ಸಿನಿಮಾವೊಂದು ಕನ್ನಡದಲ್ಲಿ ಡಬ್​ ಆಗಿ ಬಿಡುಗಡೆಯಾಗುತ್ತಿದೆ. ಲಾಠಿ ಸಿನಿಮಾವನ್ನು ಎ.ವಿನೋದ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಸುಬ್ರಹ್ಮಣ್ಯಂ ಮತ್ತು ಬಾಲಕೃಷ್ಣ ತೋತ ಅವರ ಛಾಯಾಗ್ರಹಣವಿದೆ. ಶಾಮ್.ಸಿ.ಎಸ್ ಯುವನ್ ಶಂಕರ್ ರಾಜ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಇನ್ನೂ ಎಷ್ಟು ದಿನ ಅಂಧಭಕ್ತರನ್ನು ಸಹಿಸಿಕೊಳ್ಳಬೇಕು?: ಪ್ರಕಾಶ್​ ರಾಜ್​ ಟ್ವೀಟ್

Last Updated : Dec 15, 2022, 3:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.