ಮೈಸೂರು : ತಾಲ್ಲೂಕು ಕಚೇರಿಯ ನೌಕರನೊಬ್ಬ ಕೊರೊನಾ ಪಾಸಿಟಿವ್ ವ್ಯಕ್ತಿಯ ಸಂಪರ್ಕ ಹೊಂದಿದ್ದು ತಾಲ್ಲೂಕು ಕಚೇರಿಯನ್ನು ಸೀಲ್ಡೌನ್ ಮಾಡಿರುವ ಘಟನೆ ತಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯ ಸಹೋದರನಿಗೆ ಕೊರೊನಾ ಸೋಂಕು ತಗುಲಿತ್ತು. ಈತ ಸೋಂಕಿತ ಅಣ್ಣನ ಜೊತೆಯಲ್ಲಿಯೇ ವಾಸವಾಗಿದ್ದರಿಂದ ಈತನಿಗೂ ಸೋಂಕು ಬಂದಿರಬಹುದೆಂದು ಊಹಿಸಿ ತಾಲ್ಲೂಕು ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ತಾಲ್ಲೂಕು ಕಚೇರಿ ಇರುವ ಮಿನಿ ವಿಧಾನಸೌಧವನ್ನು ಸ್ಯಾನಿಟೈಸ್ ಮಾಡಲಾಗಿದೆ. ಗ್ರಾಮ ಸೇವಕ ನೌಕರನಿಗೆ ಕೊರೊನಾ ಪರೀಕ್ಷೆಯ ವರದಿ ತಿಳಿದುಕೊಂಡು ಕಚೇರಿಗೆ ಬರುವಂತೆ ಸೂಚಿಸಲಾಗಿದೆ.