ETV Bharat / state

ಇಮ್ಯೂನ್‌ ಬೂಸ್ಟರ್ ಕಿಟ್ ಬಿಡುಗಡೆ ಮಾಡಿದ ಸುತ್ತೂರು ಶ್ರೀ - Sutturu mat shree

ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಆಯುರ್ವೇದ ಔಷಧಗಳನ್ನೊಳಗೊಂಡ ಇಮ್ಯೂನ್‌ ಬೂಸ್ಟರ್ ಕಿಟ್ ಅನ್ನು ಸುತ್ತೂರು ಶ್ರೀಗಳು ಬಿಡುಗಡೆ ಮಾಡಿದರು.

ಇಮ್ಯೂನಿಟಿ ಬೂಸ್ಟರ್ ಬಿಡುಗಡೆ
ಇಮ್ಯೂನಿಟಿ ಬೂಸ್ಟರ್ ಬಿಡುಗಡೆ
author img

By

Published : Aug 10, 2020, 1:56 PM IST

ಮೈಸೂರು: ಕೊರೊನಾ ಸೋಂಕು ತಡೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಇಮ್ಯೂನ್‌ ಬೂಸ್ಟರ್ ಕಿಟ್ ಅನ್ನು ಸುತ್ತೂರು ಶ್ರೀಗಳು ಬಿಡುಗಡೆ ಮಾಡಿದರು.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ತಡೆಗಾಗಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜೆ.ಎಸ್.ಎಸ್ ಆಯುರ್ವೇದ ಆಸ್ಪತ್ರೆಯಿಂದ ಆಯುರ್ವೇದ ಔಷಧಗಳನ್ನೊಳಗೊಂಡ ಇಮ್ಯೂನ್‌ ಬೂಸ್ಟರ್ ಕಿಟ್ ಅನ್ನು ಇಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.

ಈ ಇಮ್ಯೂನ್‌ ಬೂಸ್ಟರ್ ಕಿಟ್ ನಲ್ಲಿ ಚ್ಯವನಪ್ರಾಶ, ಹರಿದ್ರಾರಸ, ಕಷಾಯ ಚೂರ್ಣ, ರಕ್ಷೋಘ್ನ ಧೂಪ, ಅಣುತೈಲ ಆಯುರ್ವೇದ ಔಷಧಗಳನ್ನು ಒಳಗೊಂಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿವೆ. ಇದನ್ನು ಸೇವಿಸುವುದರಿಂದ ಕೊರೊನಾ ತಡೆಗಟ್ಟಬಹುದು ಜೊತೆಗೆ ಸೋಂಕಿತರು ಇಮ್ಯೂನ್‌ ಹೆಚ್ಚಿಸಿಕೊಳ್ಳಲು ಬಳಸಬಹುದಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.