ಮೈಸೂರು: ಹೊಸ ವರ್ಷಾಚರಣೆಗೆ ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಮನೆಯಿಂದ ಹೊರ ಹೋಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಕಡಕೋಳ ಬಳಿ ನಡೆದಿದೆ.
ಹೊಸ ವರ್ಷಾಚರಣೆಗೆ ಹೋದ ಯುವಕ ಹೆಣವಾಗಿ ಪತ್ತೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ ಮೃತ ಯುವಕ. ಕಡಕೋಳ ರಸ್ತೆಯಲ್ಲಿ ಸ್ಕೂಟರ್ನಿಂದ ಬಿದ್ದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಈತ ನಿನ್ನೆ ರಾತ್ರಿ ವರ್ಷಾಚರಣೆಗೆಂದು ಸ್ನೇಹಿತರ ಜೊತೆ ಹೋಗುತ್ತೇನೆ ಎಂದು ಹೇಳಿ ತನ್ನ ಬೈಕ್ನಲ್ಲಿ ತೆರಳಿದ್ದ ಎಂದು ಹೇಳಲಾಗ್ತಿದೆ. ಬೆಳಗ್ಗೆ ತಾಲೂಕಿನ ಕಡಕೋಳ ರಸ್ತೆಯಲ್ಲಿ ಬೈಕ್ ಸಹಿತ ಈತನ ಶವ ಪತ್ತೆಯಾಗಿದ್ದು, ತಮ್ಮ ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ನೀಡಿದ್ದಾರೆ. ಸ್ಥಳಕ್ಕೆ ನಂಜನಗೂಡು ಹಾಗೂ ಮೈಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಕೆಲವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.