ETV Bharat / state

ಮೈಸೂರಲ್ಲಿ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಸೂಟ್ ಕೇಸ್: ಅದರ ಮಾಲೀಕನ ಪತ್ತೆ ಹಚ್ಚಿದ ಪೊಲೀಸ್​! - suspected suitcase

ಸಯ್ಯಾಜಿರಾವ್ ರಸ್ತೆಯ ಮಧ್ಯಭಾಗದಲ್ಲಿ ಪತ್ತೆಯಾದ ನೀಲಿ ಕಲರ್ ಸೂಟ್ ಕೇಸ್ ಒಂದು ಸ್ಥಳೀಯರನ್ನು ಗಾಬರಿಗೊಳಿಸಿತ್ತು. ತಕ್ಷಣ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್‌ ಪತ್ತೆದಳ ಹಾಗೂ ಪೊಲೀಸರು ಬ್ಯಾರಿಕೇಡ್ ಹಾಕಿ ಸೂಟ್​​ಕೇಸ್​​ ಪರಿಶೀಲನೆ ನಡೆಸಿದ್ದರು.

ಬಾಂಬ್ ಪತ್ತೆ ದಳ
ಬಾಂಬ್ ಪತ್ತೆ ದಳ
author img

By

Published : Jun 16, 2020, 3:47 PM IST

Updated : Jun 16, 2020, 6:09 PM IST

ಮೈಸೂರು: ಕೊರೊನಾ ಭೀತಿ ನಡುವೆಯೂ ಅನುಮಾನಾಸ್ಪದವಾಗಿ ರಸ್ತೆಯಲ್ಲಿ ಬಿದ್ದಿದ್ದ ಸೂಟ್ ಕೇಸ್ ಒಂದು ಕೆಲಕಾಲ ಮೈಸೂರಿಗರನ್ನು ಆತಂಕಕ್ಕೆ ದೂಡಿದ ಘಟನೆ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಿದ್ದು, ಇದೀಗ ಪೊಲೀಸರು ಅದಕ್ಕೆ ಅಂತ್ಯ ಹಾಡಿದ್ದಾರೆ.

ಸಯ್ಯಾಜಿರಾವ್ ರಸ್ತೆಯ ಮಧ್ಯಭಾಗದಲ್ಲಿ ಪತ್ತೆಯಾದ ನೀಲಿ ಬಣ್ಣದ ಸೂಟ್ ಕೇಸ್ ಸ್ಥಳೀಯರನ್ನು ಗಾಬರಿಗೊಳಿಸಿತ್ತು. ತಕ್ಷಣ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಬಾಂಬ್‌ ಪತ್ತೆದಳ ಹಾಗೂ ಪೊಲೀಸರು ಬ್ಯಾರಿಕೇಡ್ ಹಾಕಿ ಸೂಟ್​​ಕೇಸ್​​ ಪರಿಶೀಲನೆ ನಡೆಸಿದರು.

ಸೂಟ್​​ಕೇಸ್​ನಲ್ಲಿ ಸ್ಫೋಟಕ ವಸ್ತುಗಳು ಇಲ್ಲದ ಕಾರಣ ಆ ಬ್ಯಾಗ್ ಅನ್ನು ಹೆಚ್ಚಿನ ಪರಿಶೀಲನೆಗಾಗಿ ಪೊಲೀಸರು ತೆಗೆದುಕೊಂಡು ಹೋಗಿದ್ದರು. ಕೊರೊನಾದ ಆತಂಕದ ನಡುವೆಯೂ ಈ ಖಾಲಿ ಸೂಟ್ ಕೇಸ್ ಜನರು ಹಾಗೂ ಪೊಲೀಸ್​ ಇಲಾಖೆಯಲ್ಲಿ ಆತಂಕ ಸೃಷ್ಟಿಸಿತ್ತು.

ಸ್ಥಳದಲ್ಲಿ ಬಾಂಬ್ ಪತ್ತೆ ದಳದಿಂದ ಪರಿಶೀಲನೆ

ಸೂಟ್​ ಕೇಸ್​ ಮಾಲೀಕನ ಪತ್ತೆ!

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಈ ಸೂಟ್​ ಕೇಸ್​ ಯಾರದ್ದು ಎಂಬುದು ಗೊತ್ತಾಗಿದೆ. ಅದನ್ನು ಬಾಂಬ್ ಪತ್ತೆದಳ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಪಕ್ಕದಲ್ಲೇ ಇರುವ ಬಟ್ಟೆ ಅಂಗಡಿಯಿಂದ ವ್ಯಕ್ತಿಯೋರ್ವ ಹೊಸ ಬಟ್ಟೆ ಖರೀದಿಸಿಕೊಂಡು ಹೋಗುವಾಗ ಸೂಟ್ ಕೇಸ್ ರಸ್ತೆಯಲ್ಲೇ ಬೀಳಿಸಿಕೊಂಡಿದ್ದನು. ಈಗ ಪೊಲೀಸರು ಸೂಟ್ ಕೇಸ್​ನ ಮಾಲೀಕನನ್ನು ಪತ್ತೆ ಹಚ್ಚಿ ಆತನಿಗೆ ಎಚ್ಚರದಿಂದ ಇರುವಂತೆ ವಾರ್ನ್​ ಮಾಡಿ, ಸೂಟ್ ಕೇಸ್ ವಾಪಸ್​ ನೀಡಿದ್ದಾರೆ.

Last Updated : Jun 16, 2020, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.