ಮೈಸೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರ ಬೆಂಗಳೂರಿನ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ, ಈ ರೀತಿ ಮುಂದೆ ನಡೆಯಬಾರದು ಎಂದು ದೇವಸ್ಥಾನಗಳಲ್ಲಿ ಶಾಂತಿ ಪೂಜೆ ಏರ್ಪಡಿಸಲಾಗಿದೆ.
ಈಶ್ವರಪ್ಪ ಮನೆಯಲ್ಲಿ ಆಕಸ್ಮಿಕ ಬೆಂಕಿ: 5 ದಿನಗಳ ಕಾಲ ದೇವಸ್ಥಾನಗಳಲ್ಲಿ ಶಾಂತಿ ಪೂಜೆ ಈಶ್ವರಪ್ಪ ಮನೆಯಲ್ಲಿ ಆಕಸ್ಮಿಕ ಬೆಂಕಿ: 5 ದಿನಗಳ ಕಾಲ ದೇವಸ್ಥಾನಗಳಲ್ಲಿ ಶಾಂತಿ ಪೂಜೆ ನಿನ್ನೆ ರಾತ್ರಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಉಪಕರಣಗಳು ಸುಟ್ಟು ಕರಕಲಾಗಿದೆ. ಈ ರೀತಿ ಘಟನೆ ಮತ್ತೊಮ್ಮೆ ಸಂಭವಿಸಬಾರದೆಂದು ಸಚಿವರು ನಂಜನಗೂಡಿನ ಶ್ರೀ ಕಂಠೇಶ್ವರ ಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ತಾಯಿಗೆ ಇಂದಿನಿಂದ 5 ದಿನಗಳ ಕಾಲ ಅಭಿಷೇಕ, ರುಧ್ರಾಭಿಷೇಕ, ನೈವೇದ್ಯ ಮತ್ತು ಅರ್ಚನೆ ಮಾಡಿಸಲಿದ್ದಾರೆ.ಸದ್ಯ ಸಚಿವರು ದೇವಾಲಯದಲ್ಲಿ ಪೂಜಾ ರಶೀದಿ ಪಡೆದಿದ್ದು, ಅವರ ಕುಟುಂಬದವರ ಹೆಸರಿನಲ್ಲಿ ಇಂದಿನಿಂದ ಶಾಂತಿ ಪೂಜೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ.