ಮೈಸೂರು: ಹಾರಂಗಿ ಜಲಾಶಯದ ಗೆಸ್ಟ್ ಹೌಸ್‌ನಲ್ಲಿ ರೌಡಿಶೀಟರ್ ಹಾಗೂ ಸ್ನೇಹಿತರೊಡನೆ ಪಾರ್ಟಿ ಮಾಡಿ ಅಮಾನತು ಶಿಕ್ಷೆಗೊಳಗಾಗಿದ್ದ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಮೇಲೆ ಇದೀಗ ಅತ್ಯಾಚಾರದ ಆರೋಪ ಕೇಳಿ ಬಂದಿದೆ.
ಪರಿಚಯವಾಗಿದ್ದ ಯುವತಿಯನ್ನ ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ವಂಚಿಸಿರುವ ಸಂಬಂಧ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಗಾಯತ್ರಿಪುರಂ ನಿವಾಸಿಯಾದ ಯುವತಿ, ಲೋಕೇಶ್ ವಿರುದ್ಧ ಜುಲೈ 16ರಂದೇ ಎಫ್ಐಆರ್ ದಾಖಲಿಸಿದ್ದಾರೆ. ದೂರು ದಾಖಲಾದಾಗಿನಿಂದ ಲೋಕೇಶ್ ಎಸ್ಕೇಪ್ ಆಗಿದ್ದಾರೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.