ETV Bharat / state

ಕಾಲುವೆಯಲ್ಲಿ ಕಾಲು ತೊಳೆಯಲು ಹೋದ ವಿದ್ಯಾರ್ಥಿ ನೀರುಪಾಲು - ಮೈಸೂರು ಹುಲ್ಲಹಳ್ಳಿ ಕಾಲುವೆ

ನಂಜನಗೂಡು ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯೋರ್ವ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋಗಿ ನೀರುಪಾಲಾದ ಘಟನೆ ನಡೆದಿದೆ..

Student Dies
ವಿದ್ಯಾರ್ಥಿ ಸಾವು
author img

By

Published : Dec 1, 2021, 11:53 AM IST

ಮೈಸೂರು : ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದ ವಿದ್ಯಾರ್ಥಿ ನೀರುಪಾಲಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ವೇಣುಗೋಪಾಲ್ (19) ಎಂಬಾತ ನೀರಲ್ಲಿ ಮುಳುಗಿ ಮೃತ ಪಟ್ಟ ವಿದ್ಯಾರ್ಥಿ.

ಈತ ಹುಲ್ಲಹಳ್ಳಿ ಬಳಿ ಇರುವ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಜಾರಿ ಕಾಲುವೆಗೆ ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಜೋರಾಗಿ ಕೂಗಿದ್ದಾರೆ.

ತಕ್ಷಣ ಸ್ಥಳೀಯರು ಬಾಲಕನ ನೆರವಿಗೆ ಧಾವಿಸಿ, ಆತನನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಕೂಡ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 8,954 ಕೋವಿಡ್‌​​ ಕೇಸ್​​ ಪತ್ತೆ, 267 ಮಂದಿ ಸಾವು

ಈ ಕುರಿತು ಮೃತನ‌ ತಂದೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.