ಮೈಸೂರು: ಆನೆ ದಂತ ಹಾಗೂ ಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ವಿಶೇಷ ಹುಲಿ ಸಂರಕ್ಷಣಾ ದಳ (STPF) ಮೈಸೂರು ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿದೆ.
ಮೊದಲಿಗೆ ಎಚ್.ಡಿ.ಕೋಟೆ ತಾಲೂಕಿನ ಕೈಲಾಸಪುರ ಗೇಟ್ ಬಳಿ ಆಕ್ರಮವಾಗಿ ಆನೆ ದಂತಗಳ ಸಾಗಣೆ ಮತ್ತು ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಆನೆ ದಂತಗಳು ಸೇರಿದಂತೆ ಕಾರು ಹಾಗೂ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಎರಡನೇ ದಾಳಿಯನ್ನು ಕೆ. ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 290.4 ಕೆ.ಜಿ ತೂಕದ 22 ಶ್ರೀಗಂಧದ ಮರದ ತುಂಡುಗಳನ್ನು ಎಸ್ಟಿಪಿಎಫ್ ದಳ ವಶಪಡಿಸಿಕೊಂಡಿದೆ. ಪ್ರಕರಣದ ಮುಂದಿನ ತನಿಖೆಗಾಗಿ ಆರೋಪಿಗಳನ್ನು ಕೆ. ಆರ್. ನಗರ ಪ್ರಾದೇಶಿಕ ವಲಯಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಸ್ತೆ ಬದಿಯೇ ನೇತಾಡಿದ ಶವ: ಬೆಚ್ಚಿಬಿದ್ದ ವಾಯುವಿಹಾರಿಗಳು