ಮೈಸೂರು: ಮಹಿಳಾ ಸಾಂತ್ವನ ಕೇಂದ್ರ ಹಾಗೂ ಮಾತೃಶ್ರೀ ಯೋಜನೆ ನಿಲ್ಲಿಸಲು ನಿರ್ಧಾರ ಮಾಡಿರುವ ಕ್ರಮ ಸರಿಯಲ್ಲ. ರಾಜ್ಯದಲ್ಲಿರುವ ಬಿಎಸ್ವೈ ಸರ್ಕಾರ ತುಘಲಕ್ ಸರ್ಕಾರ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾತೃಶ್ರೀ ಯೋಜನೆಯನ್ನು ಕೂಡ ಕೈಬಿಡುವ ಬಗ್ಗೆ ಸರ್ಕಾರ ಚಿಂತಿಸಿದ್ದು, ಇದು ಸರಿಯಲ್ಲ. ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇಲ್ಲ. ಸರ್ಕಾರಕ್ಕೆ ಶ್ರೀಮಂತ ವರ್ಗದ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಹರಿಹಾಯ್ದರು. ಇನ್ನು 20 ಲಕ್ಷ ಕೋಟಿ ಪ್ಯಾಕೇಜ್ ನೀಡ್ತೀವಿ ಅಂತ ಕೇಂದ್ರ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ ಕೇವಲ 60 ಸಾವಿರ ಕೋಟಿ ಮಾತ್ರ ಹಣ ನೀಡಿದ್ದಾರೆ. ಉದ್ಯಮದಾರರಿಗೆ ಸಹಾಯ ಮಾಡೋದು ಹಿಂದಿನಿಂದಲೂ ಇದೆ. ಸಾರ್ವಜನಿಕ ಕಂಪನಿಗಳನ್ನು ಖಾಸಗೀಕರಣ ಮಾಡುವ ಮುಖಾಂತರ ಬಿಜೆಪಿ ಸರ್ಕಾರ ಇಡೀ ದೇಶದ ವ್ಯವಸ್ಥೆಯನ್ನ ಮಾರಾಟ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆಯನ್ನು ಕೂಡ ತಿದ್ದುಪಡಿ ಮಾಡಿ ಖಾಸಗೀಕರಣಗೊಳಿಸುತ್ತಿದೆ. ರೈತರ ಸ್ವಾತಂತ್ರಕ್ಕೆ ಕಡಿವಾಣ ಹಾಕುವ ಹುನ್ನಾರ ಇದಾಗಿದೆ. ಅನ್ ಪ್ಲಾನ್ಡ್ ಲಾಕ್ಡೌನ್ನಿಂದ ಮಹಿಳೆಯರು ಮತ್ತು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ತ್ರೀಶಕ್ತಿ ಸಂಘಗಳು ಹಾಗೂ ರೈತರ ಸಾಲ ಮನ್ನಾ ಆಗಬೇಕು. ನರೇಗಾದಲ್ಲಿ 200 ದಿನಗಳ ಕೆಲಸ ಕೊಡಿ. ಬಡವರಿಗೆ, ರೈತರು, ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ತಿಂಗಳಿಗೆ ಕನಿಷ್ಠ 2 ಸಾವಿರ ಶೀಘ್ರದಲ್ಲಿ ನೀಡಿ ಎಂದು ಒತ್ತಾಯಿಸಿದ್ದಾರೆ.