ETV Bharat / state

ರಾಜ್ಯ ಬಜೆಟ್‌: 20 ಅಂಶಗಳ ಜಾರಿಗೆ ರೈತ ಸಂಘದ ಮನವಿ - ಗುಜರಾತ್ ಸರ್ಕಾರದ ಮಾದರಿ

ರೈತರ ಪರವಾಗಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತರಲು ಸಿಎಂ ಬೊಮ್ಮಾಯಿ ಅವರಿಗೆ ರಾಜ್ಯ ರೈತ ಸಂಘ ಪತ್ರ ರವಾನಿಸಿದೆ.

Karnataka State raith sangh
ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು
author img

By

Published : Feb 8, 2023, 6:08 PM IST

ಮೈಸೂರು: "ಬಸವರಾಜ ಬೊಮ್ಮಾಯಿ ಅವರು ಈ ಅವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದು, ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ರೈತರ ಪರವಾಗಿರುವ 20 ಅಂಶಗಳ ಕಾರ್ಯಕ್ರಮದ ವಿವರವನ್ನು ಪತ್ರದ ಮೂಲಕ ಅವರಿಗೆ ಕಳುಹಿಸಿದ್ದೇವೆ" ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರಿನಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು 2023 ಹಾಗೂ 24ನೇ ಸಾಲಿನ ಆಯವ್ಯಯದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗುವ ಈ ಅಂಶಗಳನ್ನು ಪರಿಗಣಿಸಬೇಕು" ಎಂದು ಮನವಿ ಮಾಡಿದರು.

20 ಅಂಶಗಳೇನು?: ರೈತ ಸಮುದಾಯಕ್ಕೆ ಮಾರಕವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಎಪಿಎಂಸಿ ತಿದ್ದುಪಡಿ ಕಾಯಿದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು. ಆಂಧ್ರ ಪ್ರದೇಶದ ಸರ್ಕಾರದ ಮಾದರಿ ಮುಂಗಾರಿನಲ್ಲಿ ರೈತರಿಗೆ ಎಕರೆಗೆ 10 ಸಾವಿರ ನಗದು ಸಹಾಯಧನ ನೀಡಬೇಕು. ನಾಟಿ ಹಸುಗಳನ್ನು ಸಾಕಲು ಗುಜರಾತ್ ಸರ್ಕಾರದ ಮಾದರಿಯಲ್ಲಿ ತಿಂಗಳಿಗೆ 400 ರೂ ಸಹಾಯಧನ ನೀಡಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 50 ರೂ ನೀಡುವ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು, ಕೃಷಿಗಾಗಿ ಆವರ್ತ ನಿಧಿ ಸ್ಥಾಪಿಸಬೇಕು. ಕಡಿಮೆ ದರದಲ್ಲಿ ಕೃಷಿ ಸಾಲ ನೀಡಬೇಕು. ಕಾಡಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ನಡೆಯುವ ಸಂಘರ್ಷ ತಡೆಯಲು ಯೋಜನೆ ರೂಪಿಸಬೇಕು.

ಬಜೆಟ್‌ ಸಿದ್ಧತೆ: ಸಿಎಂ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡನೆಗೆ ತಯಾರಿ ಪ್ರಾರಂಭಿಸಿದ್ದಾರೆ.‌ ಚುನಾವಣೆ ವರ್ಷದ ಬಜೆಟ್ ಇದಾಗಿರಲಿದ್ದು, ಜನಪ್ರಿಯ ಘೋಷಣೆಗಳೊಂದಿಗೆ ಪೂರ್ಣಪ್ರಮಾಣದ ಆಯವ್ಯಯ ಮಂಡನೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತಿ ಗರಿಷ್ಠ ಬದ್ಧ ವೆಚ್ಚ, ಜಿಎಸ್​ಟಿ ಪರಿಹಾರ ಇಲ್ಲದೇ ಈ ಬಾರಿ ಬಜೆಟ್ ತಯಾರಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂಓದಿ:ಅಕ್ರಮ ಗೋ ಹತ್ಯೆ ಆರೋಪ: ತಪಿತಸ್ಥರ ವಿರುದ್ದ ಕಠಿಣ ಕ್ರಮದ ಭರವಸೆ ನೀಡಿದ ಪೊಲೀಸ್ ಕಮಿಷನರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.