ETV Bharat / state

ನಾವೆಲ್ಲ ಜೊತೆಗಿದ್ದೇವೆ ವಿಶ್ವನಾಥ್ ಒಬ್ಬಂಟಿಯಲ್ಲ: ಸಚಿವ ಸೋಮಶೇಖರ್ - Somshekar

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಯಾರನ್ನೂ ದೂರ ಇಡುವವರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಮೇಲೆ ಯಾವುದೇ ಆರೋಪ ಮಾಡಿದರೂ ಸುಳ್ಳು. ವಿಶ್ವನಾಥ್ ಯಾಕೆ ತಮ್ಮನ್ನು ಮುಖ್ಯಮಂತ್ರಿಗಳು ದೂರಮಾಡಿದ್ದಾರೆ‌ ಎಂದು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.

Somshekar
ಸಚಿವ ಸೋಮಶೇಖರ್
author img

By

Published : Jan 23, 2021, 6:48 PM IST

ಮೈಸೂರು: ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಒಬ್ಬಂಟಿಯಲ್ಲ, ಅವರ ಜೊತೆಗೆ ನಾವೆಲ್ಲರೂ ಇದ್ದೇವೆ. ಅವರನ್ನು ನಾವು ಯಾರೂ ದೂರ ಮಾಡಿಲ್ಲ. ಅವರ ಕರೆಗೆ ನಾವೆಲ್ಲರೂ ಸ್ಪಂದಿಸುತ್ತಿದ್ದೇವೆ ಎಂದು ಸಚಿವ ಎಸ್​.ಟಿ. ಸೋಮಶೇಖರ್ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಅವರು ಯಾರನ್ನೂ ದೂರ ಇಡುವವರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಮೇಲೆ ಯಾವುದೇ ಆರೋಪ ಮಾಡಿದರೂ ಸುಳ್ಳು. ವಿಶ್ವನಾಥ್ ಯಾಕೆ ತಮ್ಮನ್ನು ಮುಖ್ಯಮಂತ್ರಿಗಳು ದೂರಮಾಡಿದ್ದಾರೆ‌ ಎಂದು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.

ನಾವೆಲ್ಲ ಜೊತೆಗಿದ್ದೇವೆ ವಿಶ್ವನಾಥ್ ಒಬ್ಬಂಟಿಯಲ್ಲ: ಸಚಿವ ಸೋಮಶೇಖರ್

ಸಂಪುಟ ವಿಸ್ತರಣೆಯಿಂದ ಯಾರೂ ಅಸಮಾಧಾನಗೊಂಡಿಲ್ಲ, ಯಾವ ಪ್ರತ್ಯೇಕ ಸಭೆಯೂ ಇಲ್ಲ. ಊಟಕ್ಕೆ ಕರೆದಿದ್ದರೆ ಹೋಗಿರುತ್ತಾರೆ. ಅದು ಬಿಟ್ಟು ಬೇರೆ ಸಭೆಗಳು ನಡೆದಿಲ್ಲ. ಮುಖ್ಯಮಂತ್ರಿಗಳ ಸೂಚನೆಯಂತೆ ಮುಂದಿನ ತಾಲೂಕು ಪಂಚಾಯಿತಿ ಚುನಾವಣೆಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಅದು ಬಿಟ್ಟು ಬೇರೆ ವಿಚಾರಗಳು ಇಲ್ಲ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ನಡೆಸಿದರೆ ಕ್ರಮ

ಯಾವುದೇ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅದನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅನುಮತಿ ಪಡೆದು ಗಣಿಗಾರಿಕೆ ನಡೆಸಿದರೆ ಸಮಸ್ಯೆಯಾಗದು. ಅದು ಬಿಟ್ಟು ಬೇರೆ ಮಾರ್ಗದಲ್ಲಿ ಹೋದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಸಮ‌ ಸಮಾಜ ನಿರ್ಮಾಣದ ಕನಸು ಕಂಡಿದ್ದವರು ಬಸವಣ್ಣ: ಸಿಎಂ ಬಿಎಸ್​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.