ETV Bharat / state

ತಜ್ಞರ ವರದಿಯ ಆಧಾರದ ಮೇಲೆ ದಸರಾ ಸಿದ್ಧತೆ : ಎಸ್.ಟಿ. ಸೋಮಶೇಖರ್ - ಮೈಸುರು ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್​​​​

ಮೈಸೂರು ಜಿಲ್ಲೆಗೆ ತಜ್ಞರ ತಂಡ ಬೇಟಿ ನೀಡಿ ವರದಿ ನೀಡಿದ ನಂತರ ವರದಿಯ ಆಧಾರದ ಮೇಲೆ ದಸರಾ ಸಿದ್ಧತೆಗಳನ್ನು ಮಾಡಿಕೊಂಡು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಎಸ್​​ಟಿ ಸೋಮಶೇಖರ್​​​ ತಿಳಿಸಿದ್ದಾರೆ.

ST Somashekhar informed about Dasara
ತಜ್ಞರ ವರದಿಯ ಆಧಾರದ ಮೇಲೆ ದಸರಾ ಸಿದ್ಧತೆ : ಎಸ್.ಟಿ. ಸೋಮಶೇಖರ್
author img

By

Published : Oct 8, 2020, 9:01 PM IST

ಮೈಸೂರು : ಕೊರೊನಾ ಅಬ್ಬರದ ನಡುವೆ ದಸರಾ ಆಚರಣೆ ಸರಳವಾಗಿರಬೇಕೋ ಅಥವಾ ಪೂಜೆಗಷ್ಟೇ ಸೀಮಿತಗೊಳಿಸಬೇಕೋ ಎಂಬುವುದು ತಜ್ಞರ ವರದಿ ನಂತರ ಖಚಿತ ಮಾಹಿತಿ ತಿಳಿದು ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್​​ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತಂತೆ ಗುರುವಾರ ನಡೆದ ವಿಡಿಯೋ ಸಂವಾದದ ದಸರಾ ಸಿದ್ದತೆಯ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ನಾಡಹಬ್ಬ ದಸರಾ ಆಚರಣೆಯನ್ನು ಸರಳ ಹಾಗೂ ಸುರಕ್ಷಿತವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ‌ ಎಂದರು.

ST Somashekhar informed about Dasara
ದಸರಾ ಸಿದ್ದತೆ ಬಗ್ಗೆ ಎಸ್.ಟಿ. ಸೋಮಶೇಖರ್ ಸಭೆ

ಜಿಲ್ಲೆಗೆ ತಜ್ಞರ ತಂಡ ಭೇಟಿ ನೀಡಿ ವರದಿ ನೀಡಿದ ನಂತರ ವರದಿಯ ಆಧಾರದ ಮೇಲೆ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಂಡು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

ಕೊರೊನಾ ನಿಯಂತ್ರಿಸುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರಾಥಮಿಕ ಸಂಪರ್ಕಿತರನ್ನು ತ್ವರಿತವಾಗಿ ಗುರುತಿಸಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯ ಪ್ರತಿ ತಾಲ್ಲೂಕಿನ ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಹೆಚ್ಚಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.