ಮೈಸೂರು: ರಾಜ್ಯದಲ್ಲೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ರದ್ದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಕೊರೊನಾದ 3 ನೇ ಅಲೆ ಮಕ್ಕಳ ಮೇಲೆ ಎಂಬ ಮಾತಿದೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಯವರೇ ಪರೀಕ್ಷೆ ರದ್ದು ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ರದ್ದಾಗಬೇಕು. ಪರೀಕ್ಷೆಗೆ ಒತ್ತು ಕೊಡಲು ಹೊಸ ಶಿಕ್ಷಣ ನೀತಿಯಿಲ್ಲ. ಆದ್ದರಿಂದ ಪರೀಕ್ಷೆಗಿಂತ ಮಕ್ಕಳ ಆರೋಗ್ಯ ಮುಖ್ಯ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕೋರ್ಸ್ಗಳ ಮಾನದಂಡಕ್ಕೆ ಬೇರೆ ಮಾರ್ಗೋಪಾಯ ಕಂಡುಕೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಜಿಲ್ಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ರೋಹಿಣಿ ಸಿಂಧೂರಿಯವರ ನಡುವಿನ ಜಟಾಪಟಿ ಬಗ್ಗೆ ಮಾತನಾಡಿದ ವಿಶ್ವನಾಥ್, ಮೈಸೂರು ಜಿಲ್ಲೆ ನಿಮ್ಮಿಬ್ಬರದ್ದೇ ಅಲ್ಲಾ! ಹಿರಿಯರಿದ್ದಾರೆ. ಅದನ್ನು ಬಿಟ್ಟು ಹಾದಿ ರಂಪ ಬೀದಿ ರಂಪ ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಓದಿ: ನಿವೃತ್ತಿ ಅಂಚಿನಲ್ಲಿ ವರ್ಗಾವಣೆ ಸೂಕ್ತವಲ್ಲ: ಹೈಕೋರ್ಟ್ ಮಹತ್ವದ ಅಭಿಪ್ರಾಯ