ಮೈಸೂರು: 127 ವರ್ಷ ಇತಿಹಾಸವಿರುವ ಮೈಸೂರು ಮೃಗಾಲಯ ಮೊದಲ ಬಾರಿಗೆ 2 ತಿಂಗಳಿಗೂ ಹೆಚ್ಚು ಕಾಲ ಲಾಕ್ಡೌನ್ನಿಂದ ಬಂದ್ ಆಗಿದ್ದು, ಜೂನ್ 8ರಿಂದ ಪುನರಾರಂಭ ಆಗಲಿದೆ.
ಹಲವು ನಿರ್ಬಂಧಗಳನ್ನು ವಿಧಿಸಿ ಮೃಗಾಲಯ ಪ್ರಾಧಿಕಾರ ಪ್ರವಾಸಿಗರಿಗೆ ಅನುಮತಿ ನೀಡಲಿದೆ. ಮೃಗಾಲಯಕ್ಕೆ ಬರುವವರು ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಪ್ರವಾಸಿಗರಿಗೆ ಮೃಗಾಲಯ ಸೂಚಿಸಿದೆ.
ಸೋಮವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮೃಗಾಲಯದ ಪುನರಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.