ಮೈಸೂರು: ಮೊದಲ ಶ್ರಾವಣ ಶನಿವಾರದ ನಿಮಿತ್ತ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ಇಂದು ಬೆಳಿಗ್ಗೆಯಿಂದಲೇ ದೇವರ ದರ್ಶನ ಪಡೆದರು.
ಆಷಾಢ ಕಳೆದ ನಂತರ ಬರುವ ಶ್ರಾವಣ ಮಾಸ, ಹಬ್ಬಗಳನ್ನು ತರುವ ತಿಂಗಳಾಗಿದ್ದು, ಈ ಮಾಸದಲ್ಲಿ ಶುಭ ಕಾರ್ಯಗಳು ಹೆಚ್ಚು ಜರುಗುತ್ತವೆ. ಇಂದು ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ನಗರದ ಪ್ರಸಿದ್ಧ ಶ್ರೀನಿವಾಸ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ನಸುಕಿನ ಜಾವ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ವೆಂಕಟೇಶನ ದರ್ಶನ ಪಡೆದರು. ಮೊದಲ ಶ್ರಾವಣ ಶನಿವಾರದ ನಿಮಿತ್ತ ದೇವಾಲಯದ ಒಳಗೆ ಮತ್ತು ಹೊರಗೆ ವಿಶೇಷ ಅಲಂಕಾರ ಮಾಡಲಾಗಿತ್ತು.