ಮೈಸೂರು: ನಗರದಲ್ಲಿ ಐಪಿಲ್ ಬೆಟ್ಟಿಂಗ್ ದಂಧೆಕೋರರನ್ನು ಮಟ್ಟ ಹಾಕಲು ಸಿಸಿಬಿಯ ವಿಶೇಷ ತಂಡ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಬುಕ್ಕಿಂಗ್, ಸೈಬರ್ ಸೆಂಟರ್ಗಳ ಮೇಲೆ ಈಗಾಗಲೇ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಡಿಸಿಪಿ ಡಾ. ಎ. ಎನ್. ಪ್ರಕಾಶ್ ಗೌಡ, ಈ ಹಿಂದಿನ ಐಪಿಎಲ್ ಸಮಯದಲ್ಲಿ ಬೆಟ್ಟಿಂಗ್ ದಂಧೆ ನಡೆದಿರುವ ಪ್ರಕರಣಗಳನ್ನ ನಾವು ಗಮನಿಸಿದ್ದೇವೆ. ಪೋಷಕರು ಮಕ್ಕಳ ಮೇಲೆ ನಿಗಾ ಇಡಬೇಕು. ಬೆಟ್ಟಿಂಗ್ ದಂಧೆ ಮಟ್ಟ ಹಾಕಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು. ಕ್ರಿಕೆಟ್ ಬೆಟ್ಟಿಂಗ್ ನಡೆಯುವ ಬಗ್ಗೆ ಗೊತ್ತಾದರೆ ನಮಗೆ ಮಾಹಿತಿ ನೀಡಿ, ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಬೆಟ್ಟಿಂಗ್ ದಂಧೆಯ ಹಳೆ ಆರೋಪಿಗಳಿಗೆ ತಿಳಿ ಹೇಳಲಾಗಿದೆ. ದಂಧೆಕೋರರ ಮೇಲೆ ನಿಗಾ ಇಡಲು ವಿಶೇಷ ತಂಡ ರಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.