ETV Bharat / state

ಮೈಸೂರಲ್ಲಿ ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಬನಾರಸ್ ಪೇಟ.. - ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಬನಾರಸ್ ಪೇಟ

ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಮಾಡಲು ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮೈಸೂರಿನಲ್ಲಿ ವಿಶೇಷವಾದ ಪೇಟ ತಯಾರಿಸಲಾಗಿದೆ.

KN_MYS
ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಬನಾರಸ್ ಪೇಟ
author img

By

Published : Nov 8, 2022, 4:08 PM IST

Updated : Nov 8, 2022, 4:48 PM IST

ಮೈಸೂರು: ನ.11 ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲು ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಮೈಸೂರಿನಲ್ಲಿ ವಿಶೇಷವಾದ ಬನಾರಸ್ ಪೇಟ ಸಿದ್ಧವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನ.11 ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣ ಮಾಡಲು ಆಗಮಿಸುತ್ತಿದ್ದು, ಅವರಿಗೆ ತೋಡಿಸಲು ಮೈಸೂರಿನಲ್ಲಿ ಕಲಾವಿದ ನಂದನ್​ ಸಿಂಗ್ ಎಂಬುವವರು ಸುಂದರವಾದ ಬನಾರಸ್ ಪೇಟ ಸಿದ್ಧಪಡಿಸಿದ್ದು, ಕೆಂಪು ಬಣ್ಣದ ಬಟ್ಟೆಯಿಂದ ಈ ಪೇಟವನ್ನು ತಯಾರಿಸಲಾಗಿದೆ.

ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ವಿಶೇಷ ಬನಾರಸ್ ಪೇಟ

ಮುಂಭಾಗದಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಮಾದರಿಯ ಭಿನ್ನದ ವರ್ಣದ ಪೆಂಡೆಂಟ್ ಆಕರ್ಷಣೆಯಾಗಿದ್ದು, ಎರಡು ಕಡೆಯಲ್ಲೂ ಮುತ್ತಿನ ಮಾದರಿಯ ಹರಳುಗಳನ್ನು ಜೋಡಿಸಲಾಗಿದ್ದು, ಬೆಂಗಳೂರಿನಲ್ಲಿ ಅನಾವರಣಗೊಳ್ಳುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯಲ್ಲಿರುವಂತೆ ಪೇಟದ ಮಾದರಿಯಲ್ಲೇ ಈ ಬನಾರಸ್ ಪೇಟವನ್ನು ಸಿದ್ಧಪಡಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಸಲಹೆಯಂತೆ ಮೈಸೂರಿನ ನಮ್ಮೂರು-ನಮ್ಮೋರು ಸಮಾಜ ಸೇವಾ ಟ್ರಸ್ಟ್​​ನ ಉಸ್ತುವಾರಿಯಲ್ಲಿ ಕಲಾವಿದರು ಈ ಬನಾರಸ್ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದನ್ನು ಸಿಎಂ ಅವರಿಗೆ ಹಸ್ತಾಂತರ ಮಾಡಲಾಗಿದ್ದು, ಕಾರ್ಯಕ್ರಮದ ದಿನ ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪೇಟ ಹಸ್ತಾಂತರ ಮಾಡಲಿದ್ದಾರೆ.

ಇದನ್ನೂ ಓದಿ: ಜಾರಕಿಹೊಳಿ ಹಿಂದೂ ಪದ ಬಳಕೆ ವೈಯಕ್ತಿಕ ವಿಚಾರ, ಕಾಂಗ್ರೆಸ್​ಗೆ ಸಂಬಂಧಿಸಿದ್ದಲ್ಲ: ಡಿಕೆಶಿ

Last Updated : Nov 8, 2022, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.