ಮೈಸೂರು: ನಗರದಲ್ಲಿ ಯಶ್ ಇಂಟರ್ನ್ಯಾಷನಲ್ ಆಯೋಜಿಸಿದ್ದ ಸೌತ್ ಇಂಡಿಯಾ- 2022 ಫ್ಯಾಷನ್ ಷೋನಲ್ಲಿ 80ಕ್ಕೂ ಹೆಚ್ಚು ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಸಭಿಕರನ್ನು ರಂಜಿಸಿದರು. ಭವಿಶ್, ನಿರೀಕ್ಷಾ, ಸಿರಿ, ಪುಣ್ಯಮೃತಾ, ಸನು, ಅನುಷಾ, ಅಮೃತಾ, ಕೃಷ್ಣ ಫ್ಯಾಷನ್ ಷೋನ ವಿವಿಧ ವಿಭಾಗಗಳಲ್ಲಿ ಕಿರೀಟ ಜಯಿಸಿದರು.
ನ್ಯಾಷನಲ್, ವೆಸ್ಟರ್ನ್, ಬ್ಯುಸಿನೆಸ್ನ ಮೂರು ಸುತ್ತುಗಳಲ್ಲಿ ರೂಪದರ್ಶಿಗಳು ಬೆಕ್ಕಿನ ನಡಿಗೆ ಹಾಕಿದರು. ಲಿಟಲ್ ಪ್ರಿನ್ಸ್ ವಿಭಾಗದಲ್ಲಿ ಬೆಂಗಳೂರಿನ ಭವಿಷ್ ಗೆದ್ದರೆ, ಸುಹಾರ್ಥ್ ಸಿಂಹ ರನ್ನರ್ ಅಪ್ ಆದರು. ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಶಿವಮೊಗ್ಗದ ನಿರೀಕ್ಷಾ ಕಿರೀಟ ಪಡೆದರೆ, ಲಕ್ಷಣ ಹಾಗೂ ಜಿ. ಪವನ್ ರನ್ನರ್ ಅಪ್ ಆದರು. ಇದೇ ವಿಭಾಗದ ಇನ್ನೊಂದು ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರದ ಸಿರಿ ವಿಜಯಿಯಾದರು.
ಮಿಸ್ ಟೀನ್ ವಿಭಾಗದಲ್ಲಿ ಮೈಸೂರಿನ ಪುಣ್ಯಾಮೃತ ಪ್ರಶಸ್ತಿ ಗೆದ್ದರೆ, ಖುಷಿ, ಅದ್ಯಶಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಿಸ್ಟರ್ ಸೌತ್ ಇಂಡಿಯಾ ವಿಭಾಗದ ಕಿರೀಟ ಸಾನು ಅವರ ಪಾಲಾದರೆ, ರೋಷನ್, ಸೈಯದ್ ನೂಮಾನ್ ರನ್ನರ್ ಅಪ್ ಆದರು.
ಅನುಷಾಗೆ ಮಿಸ್ ಸೌಥ್ ಇಂಡಿಯಾ ಕಿರೀಟ: ಮಿಸ್ ಸೌತ್ ಇಂಡಿಯಾ ಕಿರೀಟವನ್ನು ಅನುಷಾ ಗೆದ್ದುಕೊಂಡರೆ, ನಂದಿನಿ, ಜಾಸ್ಮೆ ಅವರು ಎರಡನೇ ಸ್ಥಾನ ಪಡೆದರು. ಮೈಸೂರಿನ ಅಮೃತಾ ಮಿಸೆಸ್ ಸೌತ್ ಇಂಡಿಯಾ ವಿಭಾಗದ ವಿಜೇತರಾದರೆ, ಕುಸುಮಾ, ಮಾಧುರಿ ರನ್ನರ್ ಅಪ್ ಆದರು. ಮಿಸ್ಟರ್ ಇಂಡಿಯಾ ಐಕಾನ್ ಪ್ರಶಸ್ತಿ ಕೃಷ್ಣ ಅವರಿಗೆ ಸಿಕ್ಕಿತು.
ರಾಷ್ಟ್ರೀಯ ಸುತ್ತಿನಲ್ಲಿ ಭಾರತದ ಸಂಸ್ಕೃತಿ ಪ್ರತಿಬಿಂಬಿಸುವ ವೇಷಭೂಷಣ ಇತ್ತು. ದೇವರು, ನವಿಲು, ಕಮಲದ ಹೂವು ಸೇರಿ ಬೇರೆ ಬೇರೆ ಉಡುಗೆ ತೊಡುಗೆಯನ್ನು ರೂಪದರ್ಶಿಯರು ಧರಿಸಿದ್ದರು. ವೆಸ್ಟರ್ನ್ ಸುತ್ತಿನಲ್ಲಿ ಕಪ್ಪುಬಣ್ಣದ ಬಟ್ಟೆ ತೊಟ್ಟು ಹಾಕಿದ ನಡಿಗೆ ಗಮನ ಸೆಳೆಯಿತು. ಪ್ರಶ್ನೋತ್ತರ ಸುತ್ತಿನಲ್ಲೂ ರೂಪದರ್ಶಿಯರು ಭಾಗವಹಿಸಿದ್ದರು.
ಯಶ್ ಅಂತಾರಾಷ್ಟ್ರೀಯ ಸಂಸ್ಥಾಪಕ ಸಿಇಒ ಯಶ್, ಸಿಇಒ ರಾಕಿ, ಷೋ ನಿರ್ದೇಶಕಿ ರಶ್ಮಿ ಕಾರ್ಯಕ್ರಮದಲ್ಲಿ ಇದ್ದರು. ರಮೀಜ್, ಹೇಮಲತಾ, ಶೈಲಜಾ, ಶ್ರಾವ್ಯ, ನೇತ್ರಾವತಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಓದಿ: ನಟರ ಹೆಸರಿನಲ್ಲಿ ಅಭಿಮಾನಿಗಳ ಈ ರೀತಿಯ ವರ್ತನೆ ಆಘಾತಕಾರಿ: ನಟಿ ಮೇಘನಾ ರಾಜ್