ಮೈಸೂರು: ಕೆಲ ದಿನಗಳಿಂದ ಹಾರುವ ಹಾವು ಕಾಣಿಸಿಕೊಂಡು ಮೈಸೂರು ಜನತೆಯಲ್ಲಿ ಆತಂಕ ಮೂಡಿಸಿತ್ತು. ಹಾವನ್ನು ಕೊನೆಗೂ ಉರಗ ತಜ್ಞ ಸ್ನೇಕ್ ಶ್ಯಾಮ್ ಸೆರೆ ಹಿಡಿದಿದ್ದಾರೆ.
ಮಲೆನಾಡು ಪ್ರದೇಶದಲ್ಲಿ ಕಾಣ ಸಿಗುವ ಹಾರುವ ಹಾವು ಕೆಲ ದಿನಗಳಿಂದ ಮೈಸೂರಿನಲ್ಲಿ ಕಾಣಿಸಿಕೊಂಡಿತ್ತು. ನಂತರ ಮರೆಯಾಗಿತ್ತು. ಮಂಗಳವಾರ ಸಂಜೆ ರಾಮಾನುಜ ರಸ್ತೆಯಲ್ಲಿ ರಸ್ತೆ ಮೂಲಕ ಹಾರಿ ಪೈಪ್ ಒಳಗೆ ಸೇರಿಕೊಂಡಿದ್ದ ಹಾರುವ ಹಾವನ್ನು ನೋಡಿದ ಯುವಕನೋರ್ವ ಸ್ನೇಕ್ ಶ್ಯಾಮ್ ಗೆ ಕರೆ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಅವರು ಜೋಪಾನವಾಗಿ ಹಾರುವ ಹಾವನ್ನು ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.