ಮೈಸೂರು: ನಿವೃತ್ತ ಪ್ರಾಂಶುಪಾಲರ ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ರನ್ನು ಬಂಧಿಸಲಾಗಿದೆ.
ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಅವರನ್ನು ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ವಿಶ್ವನಾಥ್ ಹಾಗೂ ಪರಶಿವಮೂರ್ತಿ ಮಧ್ಯೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು ಎನ್ನಲಾಗ್ತಿದೆ.
ವಿಶ್ವನಾಥ್ ಅವರಿಗೆ ಸಂಸ್ಕೃತ ಶಾಲೆ ನಡೆಸುತ್ತಿದ್ದ ಕೊಲೆಯಾದ ಪರಶಿವಮೂರ್ತಿ ಅವಮಾನ ಮಾಡಿದ್ದರಂತೆ. ಹಾಗಾಗಿ ಅವರನ್ನು ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.