ಮೈಸೂರು: ಲಾಕ್ಡೌನ್ ಹಿನ್ನೆಲೆ ನಗರದಲ್ಲಿ ನವ ಜೋಡಿಗಳು ಸರಳ ವಿವಾಹಕ್ಕೆ ಮೊರೆ ಹೋಗುವ ಮೂಲಕ, ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ನಗರದ ಒಂಟಿಕೊಪ್ಪಲು ದೇವಸ್ಥಾನದಲ್ಲಿ ಬೆಂಗಳೂರಿನ ಬಸವನಗುಡಿ ನಿವಾಸಿ ರಾಮಾಚಾರಿ ಹಾಗೂ ಮೈಸೂರಿನ ಕುಂಬಾರಕೊಪ್ಪಲಿನ ಐಶ್ವರ್ಯ ಸರಳವಾಗಿ ವಿವಾಹವಾದರು.
ಇನ್ನೊಂದೆಡೆ ಪಾಂಡವಪುರದ ಕಾರ್ತಿಕ್ ಹಾಗೂ ಕೆ.ಜಿ. ಕೊಪ್ಪಲಿನ ಕೃಪ ಎಂಬುವರ ವಿವಾಹ ಕೂಡ ಕೆ.ಜಿ. ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರೆವೇರಿತು.
ವಧು-ವರರು ಸೇರಿದಂತೆ ಮದುವೆಗೆ ಆಗಮಿಸಿದ ಕುಟುಂಬದ ಸದಸ್ಯರು ಕೂಡ ಸರ್ಕಾರದ ಆದೇಶ ಪಾಲಿಸುವ ಮೂಲಕ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರು.