ETV Bharat / state

ಸರಳ ದಸರಾ ಎಫೆಕ್ಟ್ : ಈ ಬಾರಿ ಸಾಂಸ್ಕೃತಿಕ ನಗರಿ ಅಂದಗಾಣಿಸುವ ಕೆಲಸ ಇಲ್ಲ - Mysuru Dasara will be held simply

ಕೊರೊನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಮೈಸೂರು ನಗರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುವ ಸಾಧ್ಯತೆಯಿಲ್ಲ.

Simple Dussera Effect on Development works
ಡಾಂಬರು ಕಿತ್ತು ಹೋಗಿರುವ ಸಾಂಸ್ಕೃತಿಕ ನಗರಿಯ ರಸ್ತೆಗಳು
author img

By

Published : Sep 28, 2020, 5:29 PM IST

ಮೈಸೂರು : ಪ್ರತಿ ವರ್ಷ ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದಂತೆ ಅರಮನೆ ಸುತ್ತಮುತ್ತಲಿನ ಹಾಗೂ ನಗರದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸರಳ ದಸರಾ ಆಚರಣೆ ನಡೆಯಲಿರುವುದರಿಂದ ರಸ್ತೆ ದುರಸ್ತಿ ಕಾರ್ಯವನ್ನೂ ಮಾಡಲಾಗ್ತಿಲ್ಲ.

ಕೇವಲ ರಸ್ತೆ ದುರಸ್ತಿ ಮಾತ್ರವಲ್ಲದೇ, ಸರ್ಕಾರಿ ಕಚೇರಿಗಳಿಗೆ ಬಣ್ಣ ಬಳಿಯುವುದು, ಉದ್ಯಾನಗಳ ದುರಸ್ತಿ ಸೇರಿದಂತೆ ಸಾಂಸ್ಕೃತಿಕ ನಗರಿಯನ್ನು ಅಂದಗಾಣಿಸುವ ಕೆಲಸ ಮಾಡಲಾಗ್ತಿತ್ತು. ಆದರೆ, ಈ ಬಾರಿ ಕೊರೊನಾ ಕರಿಛಾಯೆ ಅವೆಲ್ಲವನ್ನು ಕಿತ್ತುಕೊಂಡಿದೆ.

ಡಾಂಬರು ಕಿತ್ತು ಹೋಗಿರುವ ಸಾಂಸ್ಕೃತಿಕ ನಗರಿಯ ರಸ್ತೆಗಳು

ಕಳೆದ ವರ್ಷ 18 ಕೋಟಿ ರೂ.ವೆಚ್ಚದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮತ್ತು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 15 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ, ಸದ್ಯಕ್ಕೆ ರಸ್ತೆ ದುರಸ್ತಿ ಸೇರಿದಂತೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುವ ಸಾಧ್ಯತೆಯಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.