ETV Bharat / state

ಸಂವಿಧಾನ ಬದಲಾವಣೆಗೆ ಕೈ ಹಾಕಿದ್ರೆ ರಕ್ತಪಾತವಾಗುತ್ತೆ ಹುಷಾರ್​ : ಸಿದ್ದರಾಮಯ್ಯ ಎಚ್ಚರಿಕೆ

ಸಂವಿಧಾನ‌ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಮತ್ತೆ ಸಿದ್ದರಾಮಯ್ಯ ಎಚ್ಚರಿಕೆ
author img

By

Published : Oct 15, 2019, 10:02 AM IST

ಮೈಸೂರು: ಸಂವಿಧಾನ‌ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಧರ್ಮ ದೀಕ್ಷೆ ಅಂಗವಾಗಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ದೇಶದ ಸಂವಿಧಾನ ಬದಲಾವಣೆ ಮಾಡಲು ಕಾಣದ ಕೈಗಳು ಯತ್ನಿಸುತ್ತಿವೆ. ಆದರೆ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ರಕ್ತಪಾತವೇ ಆಗಲಿದೆ ಎಂದು ಅವರು ಎರಡನೇ ಬಾರಿ ಗುಡುಗಿದ್ರು.

ಮತ್ತೆ ಸಿದ್ದರಾಮಯ್ಯ ಎಚ್ಚರಿಕೆ

ಅಂಬೇಡ್ಕರ್ ಅವರು ದಲಿತರಿಗಾಗಿ ಮಾತ್ರ ಹೋರಾಟ ಮಾಡಲಿಲ್ಲ. ಎಲ್ಲ ವರ್ಗ, ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತಿದ್ರು. ಅವರನ್ನು ಒಂದು ಜಾತಿಯ ದೃಷ್ಟಿಕೋನದಲ್ಲಿ ನೋಡಬಾರದು, ಅವರು ವಿಶ್ವಜ್ಞಾನ ಎಂದು ಬಣ್ಣಿಸಿದರು.

ಬಾಬಾಸಾಹೇಬ ಅಂಬೇಡ್ಕರ್ ಹಿಂದೂವಾಗಿ ಹುಟ್ಟಿದರು. ಹಿಂದೂ ಧರ್ಮ ಬದಲಾವಣೆಯಾಗುತ್ತದೆ ಎಂದು ಕೊನೆಯವರೆಗೂ ಕಾದರು. ಆದರೆ ಬದಲಾವಣೆಯಾಗಲಿಲ್ಲ. ಇದರಿಂದ ಬೌದ್ಧ ಧರ್ಮ ಸ್ವೀಕಾರ ಮಾಡಿದರು‌ ಎಂದರು.

ಅಂಬೇಡ್ಕರ್ ಸಂವಿಧಾನದಿಂದ ಅನೇಕರು ರಾಜಕೀಯವಾಗಿ ಉನ್ನತ ಹುದ್ದೆಗಳಿಗೇರಿದ್ದಾರೆ. ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು.

Intro:ಸಿದ್ದರಾಮಯ್ಯ

Body:ಸಿದ್ದರಾಮಯ್ಯ

Conclusion:ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತವಾಗಲಿದೆ: ಸಿದ್ದರಾಮಯ್ಯ
ಮೈಸೂರು: ಸಂವಿಧಾನ‌ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘ , ತಾಲ್ಲೂಕು ದಸಂಸ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಧಮ್ಮ ದೀಕ್ಷೆ ಅಂಗವಾಗಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂವಿಧಾನ ಬದಲಾವಣೆ ಮಾಡಲು ಕಾಣದ ಕೈಗಳು ಯತ್ನಿಸುತ್ತಿವೆ.ಆದರೆ ಅಂತಹ ದುಸ್ಸಾಹಕಕ್ಕೆ ಕೈ ಹಾಕಿದರೆ ರಕ್ತಪಾತವೇ ಆಗಲಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತ ಸಂಘಟನೆಗಳಿಗೆ ಮಾತ್ರ ಹೋರಾಟ ಮಾಡಲಿಲ್ಲ.ಎಲ್ಲ ವರ್ಗ ಶೋಷಿತ ಸಮುದಾಯಗಳ ಪರವಾಗಿ ಹೋರಾಟ ಮಾಡಿದರು.ಅವರನ್ನು ಒಂದು ಜಾತಿಯಲ್ಲಿ ನೋಡಬಾರದು ಅವರು ವಿಶ್ವಜ್ಞಾನ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿದರು.ಹಿಂದೂಧರ್ಮ ಬದಲಾವಣೆಯಾಗುತ್ತದೆ ಎಂದು ಕೊನೆಯವರೆಗೂ ಕಾದರು.ಆದರೆ ಬದಲಾವಣೆಯಾಗಲಿಲ್ಲ.ಇದರಿಂದ ಅವರು ಬೌದ್ಧಧರ್ಮ ಸ್ವೀಕಾರ ಮಾಡಿದರು‌. ಅಂಬೇಡ್ಕರ್ ಸಂವಿಧಾನದಿಂದ ಅನೇಕರು ರಾಜಕೀಯ, ಉನ್ನತ ಹುದ್ದೆಗಳಿಗೆ ಬಂದಿದ್ದಾರೆ.ಭಾರತರದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.