ಮೈಸೂರು: ಅಕ್ಬೋಬರ್ 8ರಿಂದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಪೂರ್ಣ ವಿವರ ಇಲ್ಲಿದೆ.
ಅಕ್ಟೋಬರ್ 8 ರಂದು ಆಶ್ವಯುಜ ಶುಕ್ಲ ದಶಮಿ ಶ್ರವಣ ನಕ್ಷತ್ರ ಮೃತ್ತಿಕಾ ಸಂಗ್ರಹಣಾ ಪೂರ್ವಕ ಅಂಕುರಾರ್ಪಣ
ಅ.9 ರಂದು ಆಶ್ವಯುಜ ಶುಕ್ಲ ಏಕಾದಶಿ ಧನಿಷ್ಠಾ ನಕ್ಷತ್ರ ಧ್ವಜಾರೋಹಣ ರಾತ್ರಿ ಭೇರಿತಾಡನ
ಅ.10 ರಂದು ಆಶ್ವಯುಜ ಶುಕ್ಲ ದ್ವಾದಶಿ ಶತಾಭಿಷ ನಕ್ಷತ್ರ ಚಾಮರಾಜ ಮುಡಿ ಧಾರಣೆ, ಪುಷ್ಪ ಮಂಟಪಾರೋಹಣ
ಅ.11 ರಂದು ಆಶ್ವಯುಜ ಶುಕ್ಲ ತ್ರಯೋದಶಿ ಪೂರ್ವಾಭಾದ್ರ ನಕ್ಷತ್ರ, ವೃಷಭವಾಹನ
ಅ.12 ರಂದು ಆಶ್ವಯುಜ ಶುಕ್ಲ ಚತುದರ್ಶಿ ಉತ್ತರಾಭಾದ್ರ ನಕ್ಷತ್ರ ಕಳಶಾರೋಹಣ ಗಜಾರೋಹಣ
ಅ.13 ರಂದು ಆಶ್ವಯುಜ ಶುಕ್ಲ ಪೂರ್ಣಮಿ ಉತ್ತರಭಾದ್ರ ನಕ್ಷತ್ರ ಬೆಳಿಗ್ಗೆ 6-48 ರಿಂದ 7-18 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಶ್ರೀಮದ್ ದಿವ್ಯ ರಥಾರೋಹಣ ಮಂಟಪೋತ್ಸವ ಸಾಯಂಕಾಲ ಸಿಂಹವಾನೋತ್ಸವ ಹಂಸವಾಹನೋತ್ಸವ, ಮಂಟಪೋತ್ಸವ ನಡೆಯಲಿದೆ.
ಅ.14 ರಂದು ಆಶ್ವಯುಜ ಶುಕ್ಲ ಕೃಷ್ಣ ಪಾಡ್ಯ ರೇವತಿ ನಕ್ಷತ್ರ ಅಶ್ವಾರೋಹಣ
ಅ.15 ರಂದು ಆಶ್ವಯುಜ ಶುಕ್ಲ ಕೃಷ್ಣ ದ್ವಿತೀಯ ಅಶ್ವಿನಿ ನಕ್ಷತ್ರ, ಬೆಳಿಗ್ಗೆ ವಸಂತ ಪೂಜೆ ಅವಭೃತ ತೀರ್ಥಸ್ನಾನ, ಮಂಟಪೋತ್ಸವ, ಸಾಯಂಕಾಲ 7 ಗಂಟೆಗೆ ತೆಪ್ಪೋತ್ಸವ ಆಂದೋಳಿಕಾರೋಹಣ ಧ್ವಜಾವರೋಹಣ
ಅ.16 ರಂದು ಆಶ್ವಯುಜ ಶುಕ್ಲ ತೃತೀಯ ಭರಣಿ ನಕ್ಷತ್ರ, ಸಾಯಂಕಾಲ ಪಂಚೋಪಚಾರ ಪೂಜೆ, ಕೈಲಾಸ ವಾಹನೋತ್ಸವ ಶಯನೋತ್ಸವ
ಅ.17 ರಂದು ಆಶ್ವಯುಜ ಶುಕ್ಲ ಕೃಷ್ಣ ಚತುರ್ಥಿ, ಕೃತಿಕಾ ನಕ್ಷತ್ರ ಮಹಾಭಿಷೇಕ, ಸಿಂಹವಾಹನ.
ಅ.18 ರಂದು ಆಶ್ವಯುಜ ಶುಕ್ಲ ಪಂಚಮಿ ರೋಹಿಣಿ ಹಾಗೂ ಸಾಯಂಕಾಲ ಮುಡಿ ಉತ್ಸವ (ಜವಾಹಿರಿ ಉತ್ಸವ) ಮಂಟಪೋತ್ಸವ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.