ಮೈಸೂರು: ಗೃಹಮಂತ್ರಿಗೆ ಕಾನೂನಿನ ಜ್ಞಾನವಿಲ್ಲವೆಂದು ಹೇಳಿದ ಸಂಸದೆ ಶೋಭಾ ಕರಂದ್ಲಾಜೆಗೆ ಗೃಹಮಂತ್ರಿ ಎಂ.ಬಿ.ಪಾಟೀಲ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ದೊಡ್ಡ ಮೇಧಾವಿಗಳು, ಅವರು ಹೆಣ್ಣು ಮಗಳಾದ್ದರಿಂದ ನಾನು ಸೂಕ್ಷ್ಮವಾಗಿ ಮಾತನಾಡಿದ್ದೇನೆ ಎಂದರು.
ಇನ್ನು ಶೋಭಾ ಕರಂದ್ಲಾಜೆ ಹೆಣ್ಣು ಮಗಳು. ಅವರು ಇಂತಹ ಮಾತುಗಳನ್ನು ಆಡಬಾರದು. ಇವರ ಅಭಿಪ್ರಾಯಗಳಿದ್ದರೆ ಕ್ಯಾಬಿನೆಟ್ ಕಮಿಟಿ ಮುಂದೆ ಹೇಳಲಿ. ನಂತರ ಕ್ಯಾಬಿನೆಟ್ ಸಮಿತಿಯ ವರದಿ ಬರುವವರೆಗೆ ಶೋಭಕ್ಕ ತಾಳ್ಮೆಯಿಂದ ವರ್ತಿಸಲಿ ಎಂದರು.
ಇನ್ನು ಮುಂದೆ ಮಾತಮಾಡಿದ ಪಾಟೀಲ್, ನಾವು ಬಿಜಾಪುರದವರು ನಮ್ಮ ಬಾಯಲ್ಲಿ ಏನೇನೊ ಬರುತ್ತವೆ, ಆದ್ರೆ ಹೆಣ್ಣು ಮಗಳಾಗ ಶೋಭ ಕರಂದ್ಲಾಜೆ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದರು.