ETV Bharat / state

ಶಿವಮೊಗ್ಗ ಪ್ರಕರಣ ಕುರಿತು ಸಿಬಿಐ ತನಿಖೆಯಾಗಬೇಕು : ವಾಟಾಳ್ ನಾಗರಾಜ್ ಆಗ್ರಹ - shimoga youth murder case should be investigated by the cbi vatal nagaraj Demand

ಶಿವಮೊಗ್ಗದಲ್ಲಿ ನಡೆದಿರುವ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಆಗ್ರಹಿಸಿದ್ದಾರೆ. ಇದೇ ವೇಳೆ ಟಿಪ್ಪು ಟಿಪ್ಪು ಎಕ್ಸ್‌ಪ್ರೆಸ್‌ ಹೆಸರನ್ನು ಬದಲಾಯಿಸಬಾರದು ಎಂದಿದ್ದಾರೆ.

The Shimoga case should be investigated by the CBI vatal nagaraj
ಶಿವಮೊಗ್ಗ ಪ್ರಕರಣ ಸಿಬಿಐ ತನಿಖೆಯಾಗಬೇಕು : ವಾಟಳ್ ನಾಗರಾಜ್ ಆಗ್ರಹ
author img

By

Published : Feb 22, 2022, 5:48 PM IST

ಮೈಸೂರು: ಶಿವಮೊಗ್ಗದಲ್ಲಿ ಯುವಕನನ್ನ ಕೊಲೆ ಮಾಡಿದವರನ್ನ ಗಲ್ಲಿಗೇರಿಸಬೇಕು, ಹಾಗೂ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಆಗ್ರಹಿಸಿದ್ದಾರೆ.

ಇಂದು ನಗರದ ಆರು ಗೇಟ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದಿರುವ ಕೊಲೆ ಪ್ರಕರಣ ಅಪಾಯಕಾರಿಯಾದ ಬೆಳವಣಿಗೆ. ಪೊಲೀಸರು ಎಚ್ಚರ ವಹಿಸಬೇಕಿತ್ತು. ಅವರು ಎಚ್ಚರ ವಹಿಸಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಕೊಲೆ ಮಾಡಿರುವವರು ಯಾರೇ ಆಗಿರಲಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಜೊತೆಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮೃತಪಟ್ಟ ಹರ್ಷ ಅವರ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆಗೆ ರಾಜಕಾರಣಿಗಳ ಕುಮ್ಮಕ್ಕು ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕಾರಣಿಗಳು, ಪೊಲೀಸರ ಎದುರೇ ಅಂಗಡಿಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು, ಗಲಭೆ ಮಾಡುವುದು ತಪ್ಪು. ‌ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ. ಗಲಭೆಯನ್ನು ರಾಜಕಾರಣಿಗಳು ನೋಡಿಕೊಂಡು ನಿಂತಿದ್ದಾರೆ, ಇದು ಅಕ್ಷಮ್ಯ ಅಪರಾಧ ಎಂದರು. ಈ ಗಲಭೆಯನ್ನು ತಡೆಯಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಅವರು ಶಿಸ್ತಿನ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಬೆಳವಣಿಗೆಯಾಗುತ್ತಿರಲಿಲ್ಲ. ಜೊತೆಗೆ ಗಲಭೆ ನಿಯಂತ್ರಿಸುವಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವಾಟಾಳ್​ ಆರೋಪಿಸಿದರು.

ರಾಜಕಾರಣಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು.‌ ಇಲ್ಲದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.‌ ಇದರಿಂದ ಜನರು ಬೀದಿಗಿಳಿಯುತ್ತಾರೆ. ಹಾಗಾಗಿ ರಾಜ್ಯದ ಎಲ್ಲಾ ರಾಜಕಾರಣಿಗಳು ಶಾಂತಿ ಸ್ಥಾಪನೆಗಾಗಿ ಒಟ್ಟಾಗಿ ಸಭೆ ಸೇರಬೇಕು ಎಂದು ಮನವಿ ಮಾಡಿದರು. ಜೊತೆಗೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆಯಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.

ಟಿಪ್ಪು ಹೆಸರು ತೆಗೆಯಬಾರದು: ಸಂಸದ ಪ್ರತಾಪ್ ಸಿಂಹ ಅವರು ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ‌ ಹೆಸರನ್ನು ಬದಲಾಯಿಸಿ ಒಡೆಯರ್ ಹೆಸರನ್ನು ಇಡಬೇಕು ಎನ್ನುವುದು ಬೇಜಾವ್ದಾರಿಯ ವಿಷಯ. ಟಿಪ್ಪು ಈ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟಿದ್ದರು. ಹಾಗಾಗಿ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರನ್ನು ಬದಲಾಯಿಸಬಾರದು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಇದನ್ನೂ ಓದಿ: ಬಿಜೆಪಿಯವರು ದೇಶಪ್ರೇಮಿಗಳು ಅಂತಾರಲ್ಲ, ರಾಷ್ಟ್ರಧ್ವಜ ಅಪಮಾನಿಸಿದ ಈಶ್ವರಪ್ಪರನ್ನ ಯಾಕೆ ವಜಾ ಮಾಡಿಲ್ಲ.. ರಿಜ್ವಾನ್‌ ಅರ್ಷದ್‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.